ಅರೆಸ್ಟ್ ಮಾಡಲು ಬಂದ ಇನ್ಸ್ಪೆಕ್ಟರ್ ಗೆ ಇರಿದು ಪರಾರಿಯಾಗಲೆತ್ನಿಸಿದವನ ಕಾಲಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Firing--02

ಕನಕಪುರ,ಅ.24- ಬಂಧಿಸಲು ಬಂದ ಸಬ್‍ ಇನ್ಸ್ಪೆಕ್ಟರ್ ಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಗೆ ಗುಂಡು ಹಾರಿಸಿ ಸಾತನೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಇಂದು ಮುಂಜಾನೆ 3 ಗಂಟೆ ಸಂದರ್ಭದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಾಗ ಆರೋಪಿ ಚಂದ್ರು(20) ಪರಾರಿಯಾಗಲು ಪ್ರಯತ್ನಿಸಿ, ಕೊನೆಗೆ ಎಸ್‍ಐ ಮೇಲೆ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಸೆರೆ ಹಿಡಿದಿದ್ದೇವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಈ ಸಂಜೆಗೆ ತಿಳಿಸಿದ್ದಾರೆ. ಘಟನೆ ವಿವರ: ಕಳೆದ ಒಂದು ತಿಂಗಳ ಹಿಂದೆ ಸಾತನೂರು ಹೊರವಲಯದ ಪುಟ್ಟಸ್ವಾಮಿ ಗೌಡ ಎಂಬ ತೋಟದ ಮನೆಯಲ್ಲಿ ಕೆಂಪಮ್ಮ (80) ಎಂಬ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ರಮೇಶ್ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಸಿಕ್ಕ ಮಾಹಿತಿಯನ್ನು ಆಧರಿಸಿ ಚಂದ್ರು ಕಳೆದ ರಾತ್ರಿ ಬೋರೆಗೌಡನ ದೊಡ್ಡಿಯ ನಿವಾಸಿ ಚಂದ್ರಪ್ಪ ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಸರ್ಕಲ್ ಇನ್ಸ್‍ಪೆಕ್ಟರ್ ಮಲ್ಲೇಶ್, ಸಬ್ ಇನ್ಸ್‍ಪೆಕ್ಟ್‍ರ್ ಅನಂತ ರಾಮು, ಹೆಡ್‍ಕಾನ್ಸ್‍ಟೇಬಲ್ ಮೋಹನ್ ಮತ್ತಿತರ ಸಿಬ್ಬಂದಿಗಳು ಮನೆಯನ್ನು ಸುತ್ತುವರೆದಿದ್ದರು.

ಗಾಯಗೊಂಡ  ಇನ್ಸ್ಪೆಕ್ಟರ್
ಗಾಯಗೊಂಡ ಇನ್ಸ್ಪೆಕ್ಟರ್

ಬಾಗಿಲು ತಟ್ಟಿ ಒಳಹೋದ ನಂತರ ಚಂದ್ರು ಕೋಣೆಯಿಂದ ಹೊರಗೆ ಬಂದಿದ್ದಾನೆ. ಪೊಲೀಸರನ್ನು ನೋಡಿದ ತಕ್ಷಣ ಆತ ಗಾಬರಿಗೊಂಡು ಚಡಪಡಿಸಿದ್ದಾನೆ. ನಂತರ ಆತ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿ, ಚಿನ್ನ ಬಚ್ಚಿಟ್ಟಿರುವ ಹಾಗೂ ಸಹಕಾರ ನೀಡಿರುವ ಆರೋಪಿ ಪಕ್ಕದ ಮನೆಯಲ್ಲಿದ್ದಾನೆ ಎಂದು ಕರೆದೊಯ್ದಿದ್ದಾನೆ.  ಈ ವೇಳೆ ಎಸ್ ಐ ಅನಂತರಾಮು ಅವರು ಆರೋಪಿಯ ಜೊತೆ ಆ ಮನೆಗೆ ಹೋದಾಗ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಏಕಾಏಕಿ ಚಾಕುವಿನಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಎಸ್‍ಐ ಅನಂತ ರಾಮು ಅವರಿಗೆ ಕೈಗೆ ಇರಿತದ ಗಾಯವಾದರೂ ಛಲಬಿಡದೆ ಆತನ ಮನವೊಲಿಸಲು ಪ್ರಯತ್ನಿಸಿದರು. ಆದರೂ ಆತ ಹೊರಗೆ ಓಡಿಹೋಗುವಾಗ ಎಚ್ಚೆತ್ತ ಇನ್ಸ್‍ಪೆಕ್ಟರ್ ಮಹೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಒಂದು ಗುಂಡು ಆರೋಪಿ ಚಂದ್ರುವಿನ ಪಾದಕ್ಕೆ ಬಿದ್ದಿದ್ದೆ. ಗಂಡಿನ ಶಬ್ದ ಕೇಳಿ ನೆರೆಹೊರೆಯವರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ವಿಷಯ ತಿಳಿದು ಬೆಚ್ಚಿಬಿದ್ದಿದ್ದಾರೆ. ಕೊಲೆ ಮಾಡಿ ದೊಚ್ಚಿದ್ದ ಚಿನ್ನಾಭರಣವನ್ನು ಮಾರಾಟ ಮಾಡಿರುವುದು. ಇದಕ್ಕೆ ಆತನ ಅಣ್ಣ ಕೂಡ ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ.ಆಸ್ಪತ್ರೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಅನಂತರಾಮು ಹಾಗೂ ಆರೋಪಿ ಚಂದ್ರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‍ಪಿ ಮಹೇಶ್ ಪರಿಶೀಲನೆ ನಡೆಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin