ಅರ್ಜೆಂಟೈನಾಗೆ ರಿಯೊ ಒಲಿಂಪಿಕ್ ಹಾಕಿ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Hocly

ರಿಯೊ-ಡಿ-ಜನೈರೊ, ಆ.19-ರಿಯೊ ಒಲಿಂಪಿಕ್ ಕ್ರೀಡಾಕೂಟದ ಪುರಷರ ಹಾಕಿ ಫೈನಲ್ನಲ್ಲಿ ಅರ್ಜೆಂಟೈನಾ, ಬೆಲ್ಜಿಯಂ ವಿರುದ್ಧ 4-2 ಗೋಲುಗಳಿಂದ ಐತಿಹಾಸಿಕ ಜಯ ಸಾಧಿಸಿದೆ. ಒಲಿಂಪಿಕ್ನಲ್ಲಿ ಇದು ಅರ್ಜೆಂಟೈನಾಗೆ ಚೊಚ್ಚಲ ಬಂಗಾರದ ಗೆಲುವು. ಬೆಲ್ಜಿಯಂನ ಆಕ್ರಮಣಕಾರಿ ಆಟಗಾರ ಟನ್ಗೆ ಕೊಸಿನಲ್ ಮುನ್ನಡೆ ತಂದುಕೊಟ್ಟರಾದರೂ ನಂತರ ಅರ್ಜೆಂಟೈನಾ ಹತೋಟಿಗೆ ತೆಗೆದುಕೊಂಡು ಪಂದ್ಯದ ದಿಕ್ಕನ್ನು ಬದಲಿಸಿತು.  ಅರ್ಜೆಂಟೈನಾದ ಪಬ್ಲೊ ಇಬ್ಬಾರ, ಇಗ್ನಾಸಿಯೋ ಒರ್ಟಿಜ್ ಮತ್ತು ಅಗುಸ್ಟಿನ್ ಮಾಜಿಲ್ಲಿ ಗೋಲುಗಳನ್ನು ಬಾರಿಸಿ ತಂಡದ ಗೆಲುವಿನ ರೂವಾರಿಗಳಾದರು. ಎರಡು ಗೋಲುಗಳ ಹಿನ್ನಡೆಯಿಂದ ಬೆಲ್ಜಿಯಂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಂಚು ಪದಕಕ್ಕಾಗಿ ನಡೆದ ಇನ್ನೊಂದು ಹಣಾಹಣಿಯಲ್ಲಿ ಪೆನಾಲ್ಟಿ ಶೂಟ್ಔಟ್ನಲ್ಲಿ ಜರ್ಮನಿ, ನೆದರ್ಲೆಂಡ್ಸ್ ವಿರುದ್ಧ 4-3 ಗೋಲುಗಳೊಂದಿಗೆ ಜಯಸಾಧಿಸಿತು.

► Follow us on –  Facebook / Twitter  / Google+

Facebook Comments

Sri Raghav

Admin