ಅರ್ಧಕ್ಕೇ ನಿಂತ ಕನ್ನಡ ರಾಜ್ಯೋತ್ಸವ ಪೂರ್ವ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

rajostava

ತಿಪಟೂರು. ಅ.29-ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿ ಆಚರಿಸುವ ಸಲುವಾಗಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತೆಗೆ ಸರಿಯಾದ ಧ್ವನಿವರ್ಧಕ ನಿಯೋಜನೆ ಇಲ್ಲದ ಕಾರಣವಾಗಿ ತಯಾರಿ ಸರಿಯಾಗಿ ನಡೆಯದೇ ಅರ್ಧಕ್ಕೆ ನಿಂತ ಪ್ರಸಂಗ ನಡೆಯಿತು.ಶಿಕ್ಷಣ ಇಲಾಖೆಯ ವತಿಯಿಂದ ನಗರದ 24 ಶಾಲೆಗಳ ತಲಾ 25 ಮಕ್ಕಳನ್ನು ಅಂದರೆ ಸುಮಾರು 600 ಮಕ್ಕಳು ಪೂರ್ವ ತಯಾರಿಗಾಗಿ ಬೆಳಿಗ್ಗೆ 10.30ಕ್ಕೆ ಕ್ರೀಡಾಂಗಣಕ್ಕೆ ಕರೆತರಲಾಗಿತ್ತು. ಆದರೆ ಅಲ್ಲಿನ ಪೂರ್ವ ತಯಾರಿಯ ಜವಾಬ್ದಾರಿಯನ್ನು ನಗರಸಭೆ ಮತ್ತು ತಾಲ್ಲೂಕು ಆಡಳಿತ ವಹಿಸಿಕೊಳ್ಳಬೇಕಿತ್ತು. ಆದರೆ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಆಗಮಿಸದೇ ಧ್ವನಿವರ್ಧಕವನ್ನಾಗಲಿ, ಕುಡಿಯುವ ನೀರಿನ ವ್ಯವಸ್ಥೆಯನ್ನಾಗಲಿ ಮಾಡದೇ ಇದ್ದದ್ದು ಬೇಜವಾಬ್ದಾರಿತನ ಎದ್ದು ತೋರುತ್ತಿತ್ತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಪ್ರಕಾಶ್, ನಗರಸಭೆಗೆ ಧ್ವನಿವರ್ಧಕದ ಆಯೋಜನೆಯ ಜವಾಬ್ದಾರಿಯನ್ನು ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ವಹಿಸಿದ್ದರು. ಆದರೆ ಪೂರ್ವ ತಯಾರಿಯ ಬಗ್ಗೆ ಯಾವುದೇ ಮಾಹಿತಿಯನ್ನು ನಮಗೆ ನೀಡಿಲ್ಲ. ಸಮಸ್ಯೆ ಬಗ್ಗೆ ತಿಳಿದ ನಂತರದಲ್ಲಿ ನಮ್ಮ ವಾಹನವನ್ನೆ ಕಳುಹಿಸಿ ಧ್ವನಿವರ್ಧಕದ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಅದ್ಧೂರಿ ಆಚರಣೆಗಾಗಿ ಸರ್ಕಾರ ಮತ್ತು ಕನ್ನಡ ಪರ ಸಂಘಟನೆಗಳು ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು ತಿಳಿದಿದ್ದರೂ ನಗರದಲ್ಲಿನ ತಾಲ್ಲೂಕು ಆಡಳಿತ ಮತ್ತು ನಗರಸಭೆಯ ಬೇಜವಾಬ್ದಾರಿತನ, ಕನ್ನಡ ಬಗೆಗಿನ ನಿರ್ಲಕ್ಷ್ಯತೆ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ವೀರ ಸಮರಸೇನೆ ತಾಲ್ಲೂಕು ಆಧ್ಯಕ್ಷ ಬಿ.ಟಿ.ಕುಮಾರ್ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin