ಅರ್ಧಗಂಟೆ ಕಾದು ಮತಚಲಾಯಿಸಿದ ಲೀಲಾವತಿ, ವಿನೋದ್‍ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Leelavati--01
ನೆಲಮಂಗಲ, ಮೇ 12- ತಾಲ್ಲೂಕಿನ ಕಸಬಾ ಹೋಬಳಿಯ ಮೈಲನಹಳ್ಳಿ ಮತಗಟ್ಟೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಅರ್ಧಗಂಟೆ ತಡವಾಗಿ ಮತದಾನ ಆರಂಭವಾಯಿತು. ಬೆಳಗ್ಗೆ ನಟಿ ಲೀಲಾವತಿ ಅವರು ಪುತ್ರ ವಿನೋದ್‍ರಾಜ್ ಜತೆ ಮತ ಚಲಾಯಿಸಲು ಈ ಮತಗಟ್ಟೆಗೆ ಆಗಮಿಸಿದಾಗ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅರ್ಧಗಂಟೆ ಕಾದು ಕುಳಿತರು. ಇಲ್ಲಿನ ಮತಯಂತ್ರದಲ್ಲಿ ಮತ ಚಲಾಯಿಸಿದಾಗ ಸೌಂಡ್ ಬಾರದ ಹಿನ್ನೆಲೆಯಲ್ಲಿ ಅರ್ಧಗಂಟೆ ಮತದಾನವನ್ನು ಚುನಾವಣಾಧಿಕಾರಿಗಳು ಸ್ಥಗಿತಗೊಳಿಸಿ, ಮತಯಂತ್ರವನ್ನು ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ತದಂನಂತರ ಲೀಲಾವತಿ ಹಾಗೂ ವಿನೋದ್‍ರಾಜ್ ಅವರು ಮತ ಚಲಾಯಿಸಿದರು. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin