ಅರ್ಧದಲ್ಲೇ ಇಳಿಸಿದ ಅಂಬ್ಯುಲೆನ್ಸ್ ಚಾಲಕ , ಮಗಳ ಶವ ಹೊತ್ತು 5 ಕಿ.ಮೀ ನಡೆದ ತಂದೆ

ಈ ಸುದ್ದಿಯನ್ನು ಶೇರ್ ಮಾಡಿ

Dead-Body

ಮಲ್ಕಂಗಿರಿ(ಒಡಿಶಾ), ಸೆ.3-ಶವ ಸಾಗಿಸಲು ಹಣವಿಲ್ಲದೇ ಮಡದಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತ ಪತಿಯೊಬ್ಬ 10 ಕಿ.ಮೀ. ದೂರ ನಡೆದ ಘಟನೆ ಮಾಸುವ ಮುನ್ನವೇ ಒಡಿಶಾದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ಜರುಗಿದೆ. ಅಂಬ್ಯುಲೆನ್ಸ್ ಚಾಲಕನೊಬ್ಬ ಕೈ ಕೊಟ್ಟಿದ್ದರಿಂದ ತನ್ನ ಏಳು ವರ್ಷದ ಮಗಳ ಮೃತದೇಹವನ್ನು ಹೊತ್ತ ತಂದೆಯೊಬ್ಬ 5 ಕಿ.ಮೀ. ದೂರ ಕಣ್ಣೀರು ಹಾಕುತ್ತಾ ಹೊತ್ತು ನಡೆದ ಮನಕಲಕುವ ಘಟನೆ ಮಲ್ಕಂಗಿರಿಯಲ್ಲಿ ಇಂದು ನಡೆದಿದೆ.  ಬರ್ಶಾ ಖೆಮುಡು ಎಂಬ ಬಾಲಕಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳು. ಮಥಿಲಿಯ ಆಸ್ಪತ್ರೆಗೆ ಆಕೆಯನ್ನು ಆಂಬ್ಯುಲೆನ್ನಲ್ಲಿ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಬಾಲಕಿ ಕೊನೆಯುಸಿರೆಳೆದಳು. ಆದರೆ, ಚಾಲಕನು ಶವವನ್ನು ಅಂಬ್ಯುಲೆನ್ಸ್ನಲ್ಲಿ ಹೊತ್ತೊಯ್ಯಲು ನಿರಾಕರಿಸಿ ಮಾಂಯಗುಡ ಎಂಬ ಪ್ರದೇಶದಲ್ಲಿ ಮೃತದೇಹ ಮತ್ತು ಪೋಷಕರನ್ನು ಇಳಿಸಿದ.

ಈ ಮಾರ್ಗದಲ್ಲಿ ವಾಹನ ಸಂಚಾರ ವಿರಳವಾಗಿದ್ದ ಕಾರಣ ತಂದೆ ಕಣ್ಣೀರು ಹಾಕುತ್ತಾ ಶವವನ್ನು ಸುಮಾರು 5 ಕಿ.ಮೀ. ಹೊತ್ತು ನಡೆದ.  ಈ ಘಟನೆ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ನಿರ್ಲಕ್ಷ್ಯ ತೋರಿದ ಚಾಲಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin