ಅಲಿಯಾಗೆ ಮತ್ತೊಂದು ಗೆಲುವಿನ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

alia-bhat
ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಮತ್ತು ಸಿಂಪಲ್ ಬ್ಯೂಟಿ ಅಲಿಯಾ ಭಟ್ ನಟಿಸಿರುವ ಡಿಯರ್ ಜಿಂದಗಿ ನಿರೀಕ್ಷೆಯಂತೆ ಭರ್ಜರಿ ಹಿಟ್ ಆಗಿದೆ. ಈ ಸಿನಿಮಾ ಮೂರೇ ದಿನದಲ್ಲಿ 32 ಕೋಟಿ ರೂ.ಗಳನ್ನು ಬಾಚಿಕೊಂಡು ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಇದು ಅಲಿಯಾಗೆ ಮತ್ತೊಂದು ಗೆಲುವಿನ ಕಿರೀಟ.ಎಸ್‍ಆರ್‍ಕೆ, ಎಬಿ ಮತ್ತು ನಿರ್ದೇಶಕರಾದ ಗೌರಿ ಶಿಂಧೆ ಬಗ್ಗೆ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಡಿಯರ್ ಜಿಂದಗಿ ಚಿತ್ರದಲ್ಲಿ ಸಿನಿಮಾಟೋಗ್ರಾಫರ್ ಆಗಿ ಅಲಿಯಾ ಗಮನಸೆಳೆದಿದ್ದಾಳೆ. ಆಕೆಯ ಲವಲವಿಕೆ ಅಭಿನಯ ಚೇತೋಹಾರಿ. ಶಾರುಖ್‍ಗೆ ಸಡ್ಡು ಹೊಡೆಯುವಂತೆ ಅಭಿನಯ ನೀಡಿರುವ ಈ ಕ್ಯೂಟ್ ನಟಿ ಮತ್ತೊಮ್ಮೆ ಅಭಿಮಾನಿಗಳ ಮನತಣಿಸಿದ್ದಾಳೆ.

ಶುಕ್ರವಾರ ಬಿಡುಗಡೆಯಾದ ಡಿಯರ್ ಜಿಂದಗಿ ಶುಕ್ರವಾರ 8.75 ಕೋಟಿ ರೂ. ಶನಿವಾರ 11.25 ಕೋಟಿ ರೂ. ಮತ್ತು ಭಾನುವಾರ 12.50 ಕೋಟಿ ರೂ.ಗಳ ಬೊಂಬಾಟ್ ಕಲೆಕ್ಷನ್ ಗಳಿಸಿದೆ. ದೇಶ ವಿದೇಶಗಳ 1200 ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಡಿಜೆ ಸಿನಿಮಾ ಓವರ್‍ಸೀಸ್ ಬಾಕ್ಸ್ ಆಫೀಸ್‍ನಲ್ಲಿ (ಅಮೆರಿಕ, ಕೆನಡಾ ಮತ್ತು ಯುಎಇ) 27.45 ಕೋಟಿ ರೂ. ಗಳಿಸಿದೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin