ಅಲೆಮಾರಿ ಜನಾಂಗದವರು ಟೆಂಟ್ : ಸ್ಥಳೀಯ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆ 

ಈ ಸುದ್ದಿಯನ್ನು ಶೇರ್ ಮಾಡಿ

dabadspete

ದಾಬಸ್‍ಪೇಟೆ, ಮಾ.2- ಸ್ಥಳೀಯ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದಂತೆ ಸಮಸ್ಯೆಗಳ ಸರಮಾಲೆಯೇ ತೆರೆದುಕೊಳ್ಳುತ್ತಿದೆ ಇದರಿಂದ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಲೆ ನೋವು ಆರಂಭವಾಗಿದೆ.ಸೋಂಪುರಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡವಂದ ಕಾಲೋನಿಗ್ರಾಮದಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಂಡಿರುವ ಖಾಲಿ ಪ್ರದೇಶದಲ್ಲಿ ಮಹಾರಾಷ್ಟ್ರದ ಅಲೆಮಾರಿ ಜನಾಂಗದವರು ಟೆಂಟ್ ಹಾಕಿಕೊಂಡು ಇರುವುದರಿಂದ ಈ ಭಾಗದಲ್ಲಿನ ವಾತಾವರಣ ಸಂಫೂರ್ಣ ಕಲುಷಿತವಾಗುತ್ತಿದೆ, ಮತ್ತು ಸುತ್ತಮತ್ತಲ ಮನೆಗಳಲ್ಲಿ ಕಳತನವಾಗುತ್ತಿದ್ದು ಸಮಸ್ಯೆಯಾಗಿ ಪರಿಣಮಿಸಿದ್ದಾರೆ ಎನ್ನುತ್ತಾರೆ ಉಪಾಧ್ಯಕ್ಷ ಇಂದ್ರಮ್ಮ ಪರಮೇಶ್.

dpt 1.1
ಮುಖ್ಯವಾಗಿ ಈ ಪರಿಸರದಲ್ಲಿ ಮಲ ಮೂತ್ರದದುರ್ವಾಸನೆ, ಪ್ಲಾಸ್ಟಿಕ್, ವಸ್ತುಗಳು ಕಸ, ಪ್ರಾಣಿಗಳ ಮೂಳೆ ಮತ್ತು ಕೋಳಿ ಸೇರಿದಂತೆಇತರೆ ಪಕ್ಷಿಗಳ ಪುಕ್ಕ ಸೇರಿದಂತೆಇತರೆಕಶ್ಮಲ ವಸ್ತುಗಳ ರಾಶಿಯೇ ಬಿದ್ದಿದೆಇದರಿಂದ ಈ ಭಾಗದಲ್ಲಿಜನಓಡಾಡಲುಕಷ್ಟವಾಗುತ್ತಿದೆ ಈ ಜಾಗದಲ್ಲಿ ಕನಿಷ್ಠ 150ಕ್ಕೂ ಹೆಚ್ಚು ಟೆಂಟ್‍ಗಳು ಇದ್ದು 1 ವರ್ಷದಿಂದ 7 ವರ್ಷದವರೆಗಿನ ಮಕ್ಕಳು ರಸ್ತೆಯಲ್ಲಿಯೇ ಮಲಗುವುದು, ವಾಹನಗಳಿಗೆ ಅಡ್ಡ ಬರುವುದು ಮಾಡುತ್ತಿವೆಇಲ್ಲಿಯ ಮಕ್ಕಳಿಗೆ ಯಾವುದೇ ಶಿಕ್ಷಣ ಸಿಗುತ್ತಿಲ್ಲ ಒಟ್ಟಾರೆಇಲ್ಲಿಯ ಅಲೆಮಾರಿಗಳು ಸ್ಥಳೀಯ ಜನರಿಗೆ ಮತ್ತುಗ್ರಾಮ ಪಂಚಾಯಿತಿಗೆ ತಲೆ ನೋವಾಗಿದ್ದಾರೆಇತ್ತಿಚೆಗೆ ಚಿಕ್ಕ ಮಕ್ಕಳಿಗೆ ಸರಕಾರದ ವತಿಯಿಂದ ನೀಡಿದ ರುಬೆಲ್ಲಾ ಚುಚ್ಚು ಮದ್ದನ್ನುಯಾವುದೇ ಮಗುವಿಗೂ ಹಾಕಿಸಿಲ್ಲ ಇದರ ಪರಿಣಾಮ ಮಕ್ಕಳಿಗೆ ತಗುಲುವ ರೋಗ ಉಲ್ಬಣಗೊಂಡುಇತರ ಮಕ್ಕಳಿಗೂ ಹರಡುವ ಸಾಧ್ಯತೆ ಇದೆ. ಇದು ಸ್ಥಳೀಯ ಜನರಿಗೆ ಭಯವಾಗಿದೆ ಎನ್ನುತಾರೆ ಗಾಪಂ ಸದಸ್ಯಆನಂದ್.
ಇಲ್ಲಿಯ ಅಲೆಮಾರಿಗಳನ್ನು ಸ್ಥಳಾಂತರ ಮಾಡಿಸಿ ಪರಿಸರರಕ್ಷಣೆ ಮತ್ತು ಸ್ಥಳೀಯ ಜನರಿಗಾಗುವ ತೊಂದರೆ ತಪ್ಪಿಸಲು ದಾಬಸ್‍ಪೇಟೆ ಪೊಲೀಸರಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ದೂರು ನೀಡಿದ್ದಾರೆ.ಗ್ರಾ.ಪಂ ಸದಸ್ಯ ಪುರುಷೋತ್ತಮ, ಭಾಗ್ಯಮ್ಮ, ಜಗದೀಶ್ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.

dpt 1.2

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin