ಅಲೋವೆರಾದ ಸೌಂದರ್ಯ ಗುಟ್ಟು ತಿಳಿಯಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

aloe-vera

ಅನೇಕ ವರ್ಷಗಳಿಂದ ಅಲೋವೆರಾ ಅಥವಾ ಲೋಳೆರಸದ ಆರೋಗ್ಯ ಪ್ರಯೋಜನಗಳು ತಿಳಿದಿವೆ. ಇದು ಉತ್ಕøಷ್ಟ ವೈದ್ಯಕೀಯ ಗುಣಗಳನ್ನು ಹೊಂದಿದೆ ಎಂಬುದನ್ನು ವಿವಿಧ ವಿಜ್ಞಾನ ಮತ್ತು ಸಂಶೋಧನೆಗಳು ದೃಢಪಡಿಸಿವೆ. ಬೇಸಿಗೆಯಲ್ಲಿ ಇದು ಉತ್ತಮ ಚರ್ಮ ಆರೈಕೆ ಔಷಧಿಯಾಗಿ ಚಿರಪರಿಚಿತವಾಗಿದೆ. ಚರ್ಮದ ಮೇಲೆ ಅಲೋವೆರಾ ಮಾಡುವ ಜಾದುವಿಗೆ ಸರಿಸಾಟಿಯಾಗಬಲ್ಲ ಮತ್ತೊಂದು ಕ್ರೀಮ್ ಇಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ.

aloe-vera-2

ಆರೋಗ್ಯ ರಕ್ಷಣೆಗಾಗಿ ಅಲೋವೆರಾದ ಪ್ರಯೋಜನಗಳು ಗರಿಷ್ಟ ಸಂಖ್ಯೆಯಲ್ಲಿದ್ದು, ವಿಸ್ಮಯಕಾರಿಯಾಗಿದೆ. ಅಲೋವೆರಾ ಉತ್ಪನ್ನವನ್ನು ನೈಸರ್ಗಿಕ ಮಾರ್ಗದಿಂದ ಸುಧಾರಣೆ ಮಾಡುವ ಮೂಲಕ ಮಹತ್ವದ ರೀತಿಯಲ್ಲಿ ನಮ್ಮ ದೈನಂದಿನ ಪೋಷಕಾಂಶಕ್ಕೆ ಅಳವಡಿಸಿಕೊಳ್ಳಲಾಗಿದೆ. ನಮ್ಮ ದೇಹದ ಶಕ್ತಿಯ ಪುನರ್ ಉತ್ಪತ್ತಿ ಹಾಗೂ ನಾವು ಸುಂದರವಾಗಿ ಕಾಣಲು ಅಲೋವೆರಾ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಸಹಕಾರಿಯಾಗಿದೆ. ಇದೇ ವೇಳೆ ನಾವು ದೇಹ ಮತ್ತು ಮನಸ್ಸಿನ ಸಮತೋಲನ ಹಾಗೂ ಒಟ್ಟಾರೆ ಸ್ವಾಸ್ಥ್ಯ ಹೊಂದುತ್ತೇವೆ. ಪದೇ ಪದೇ ವೈದ್ಯರನ್ನು ಭೇಟಿ ಮಾಡುವುದನ್ನು ತಪ್ಪಿಸುವ ಜತೆಗೆ ಪೂರಕ ಶಕ್ತಿ ಹಾಗೂ ಬಾಹ್ಯ ಸೌಂದರ್ಯ ಮತ್ತು ವರ್ಚಸ್ಸು ಸುಧಾರಣೆ ಹೊಂದುವಂತೆ ಮಾಡುವಲ್ಲಿ ನೆರವಾಗುತ್ತದೆ. ಅಲೋವೆರಾದ ಘಟಕಾಂಶಗಳು ಆರೋಗ್ಯಕ್ಕೆ ವಿಶಿಷ್ಟ ಮತ್ತು ಪ್ರಯೋಜನಕಾರಿ ಉಪ ಯೋಗಗಳನ್ನು ನೀಡಿ ನಮ್ಮ ಪೋಷಕಾಂಶಕ್ಕೆ ಅಗತ್ಯವಾಗಿ ಬೇಕಾದ ನೈಸರ್ಗಿಕ ಆಹಾರವನ್ನು ಒದಗಿಸುತ್ತದೆ.

aloe-vera-1

ಇತ್ತೀಚಿನ ವರ್ಷಗಳಲ್ಲಿ ವಿವಿಧ ವರ್ಗಗಳ ಅನೇಕ ವಿಭಿನ್ನ ಉತ್ಪನ್ನಗಳು ಅಲೋವೆರಾದ ಶೇಕಡಾವಾರು ಪ್ರಮಾಣವನ್ನು ಹೊಂದಿರುತ್ತವೆ. ಆರೋಗ್ಯ, ಆಹಾರ ಮತ್ತು ಸ್ವಾಸ್ಥ್ಯ ಉತ್ಪನ್ನಗಳನ್ನು ತಯಾರಿಸುವ ಉದ್ಯಮ ಗಳು 2010 ರಿಂದ 2020ರ ದಶಕದಲ್ಲಿ ತನ್ನ ಬೆಳವಣಿಗೆಗೆ ಅಲೋವೆರಾವನ್ನು ಒಂದು ಪ್ರಮುಖ ಉತ್ಪನ್ನವಾಗಿ ಪರಿಗಣಿಸಿರುವುದು ಅಚ್ಚರಿಯ ಸಂಗತಿಯಲ್ಲ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin