ಅಲ್ಟ್ರಾ ಮಾಡ್ರನ್ ನಟಿ ವರಲಕ್ಷ್ಮಿಯಾದಾಗ…!

ಈ ಸುದ್ದಿಯನ್ನು ಶೇರ್ ಮಾಡಿ

Kangana

ಬಾಲಿವುಡ್‍ನ ಅಲ್ಟ್ರಾ ಮಾಡ್ರನ್ ನಟಿ, ಬಿಂದಾಸ್ ಬೆಡಗಿ ಕಂಗನಾ ರನೌಟ್ ಈಗ ವರಲಕ್ಷ್ಮಿ..! ಈ ಚಿತ್ರ ನೋಡಿದರೆ ನಿಮಗೆ ಅಚ್ಚರಿಯಾಗಬಹುದು. ಹೌದು, `ಸ್ವಚ್ಛ ಭಾರತ’ ಅಭಿಯಾನದ ಜಾಹೀರಾತಿಗಾಗಿ ಕಂಗನಾ `ಮಹಾಲಕ್ಷ್ಮಿ’ಯಾಗಿ ಕಂಗೊಳಿಸಿದ್ದಾಳೆ.  `ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವರು ನೆಲೆಸುತ್ತಾರೆ’ ಎಂಬ ಮಾತಿನಂತೆ ಸ್ವಚ್ಛತೆ ನಿರ್ವಹಣೆ ಸಂದೇಶ ಸಾರಲು ತಾರೆ ಕಂಗನಾಳನ್ನು ಜಾಹೀರಾತಿನಲ್ಲಿ ಹೀಗೆ ಬಳಸಿಕೊಳ್ಳಲಾಗಿದೆ. ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತವಾದ ಲಕ್ಷ್ಮಿ, ವಿಷ್ಣುವಿನ ಜೊತೆ ಗರುಡನೊಂದಿಗೆ ವಿಹರಿಸುವುದನ್ನು ನೀವು  ಫೋಟೋಗಳಲ್ಲಿ ನೋಡಿರುತ್ತೀರಿ. ಈ ಜಾಹಿರಾತಿನಲ್ಲಿ ಲಕ್ಷ್ಮಿ ವೇಷಧಾರಿ ಕಂಗನಾ ಸರ್ವಾಲಂಕಾರ ಭೂಷಿತೆಯಾಗಿ ಹಾರ್ಲಿ ಡೇವಿಡ್‍ಸನ್ ಬೈಕ್ ಏರಿ ಹೋಗುವ ದೃಶ್ಯವಿದೆ.
ಸ್ವಚ್ಚತೆ ಸಂದೇಶಕ್ಕೆ ಗ್ಲಾಮರ್ ಸ್ಪರ್ಶ ನೀಡಲು ಈ ಪರಿಕಲ್ಪನೆಯ ಜಾಹೀರಾತು ಸೃಷ್ಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ `ಸ್ವಚ್ಚ ಭಾರತ’ ಅಭಿಯಾನ ಎಷ್ಟು ಜನರಿಗೆ ನೆನಪಿದೆಯೋ ತಿಳಿದಿಲ್ಲ. ಆದರೆ, ಕಂಗನಾ `ಲಕ್ಷ್ಮಿ’ ಜಾಹೀರಾತು ಜನರಿಗೆ ತಲುಪುವಂತೆ ಮಾಡು ವುದು ಇದರ ಉದ್ದೇಶ… `ಸರ್ವಂ ಲಕ್ಷ್ಮೀ ಮಯಂ’..!

Facebook Comments

Sri Raghav

Admin