ಅಳಿಯನನ್ನೇ ಸಲಹೆಗಾರನನ್ನಾಗಿ ನೇಮಿಸಿಕೊಂಡ ಡೊನಾಲ್ಡ್ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump

ವಾಷಿಂಗ್ಟನ್, ಜ.10-ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡುವುದಕ್ಕೂ ಮುನ್ನವೇ  ವಿವಾದಗಳ ಸರಮಾಲೆಗಳನ್ನೇ ಸೃಷ್ಟಿಸಿರುವ ಡೊನಾಲ್ಡ್ ಟ್ರಂಪ್ ತಮ್ಮ ಅಳಿಯ ಜರೆಡ್ ಕುಶ್ನೆರ್ ಅವರನ್ನು  ನೇಮಕ ಮಾಡಿದ್ದಾರೆ. ಈ ಮೂಲಕ ಶ್ವೇತಭವನದಲ್ಲಿ ಅತ್ಯಂತ ಪ್ರಬಲ ಹುದ್ದೆಯೊಂದನ್ನು ತಮ್ಮ ಕೌಟುಂಬಿಕ ವೃತ್ತದಲ್ಲೇ ಟ್ರಂಪ್ ಉಳಿಸಿಕೊಂಡಿದ್ದಾರೆ.  ಆದರೆ, ಟ್ರಂಪ್‍ನ ಈ ಏಕಪಕ್ಷೀಯ ನಿರ್ಧಾರವನ್ನು ಸ್ವಜನ ಪಕ್ಷಪಾತ ಕಾನೂನಿನ ಅಡಿ ಪ್ರಶ್ನಿಸಲು ಅವಕಾಶವಿದ್ದು, ಈ ನೇಮಕ ಮತ್ತೊಂದು ಹೊಸ ವಿವಾದಕ್ಕೂ ಕಾರಣವಾಗಿದೆ.

ಅಧ್ಯಕ್ಷೀಯ ಚುನಾವಣೆಗಳಲ್ಲಿ ವಿಜೇತರಾದ ನಂತರ ಮತದಾರರಿಗೆ ಧನ್ಯವಾದ ಸಲ್ಲಿಸುವ ಸಾರ್ವಜನಿಕ ಸಭೆಗಳಲ್ಲಿ ಟ್ರಂಪ್ ತಮ್ಮ ಪುತ್ರಿ ಇವಾಂಕಾ ಟ್ರಂಪ್‍ರ ಪತಿ 35 ವರ್ಷದ ಕುಶ್ನೆರ್ ವಹಿಸಿದ ಪಾತ್ರಗಳನ್ನು ಪ್ರಸ್ತಾಪಿಸಿ ಆತನಿಗೆ ಉನ್ನತ ಹುದ್ದೆ ನೀಡುವ ಬಗ್ಗೆ ಮುನ್ಸೂಚನೆ ನೀಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin