ಅವರನ್ನ ನಾನೇನು ತೊಡೆಯಲ್ಲಿ ಬಚ್ಚಿಟ್ಟುಕೊಂಡಿದ್ದೀನಾ, ನೀವೇ ಹುಡುಕಿಕೊಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga-wife

ಬೆಂಗಳೂರು,ಏ.14-ಕೊಲೆಯತ್ನ, ಉದ್ಯಮಿ ಅಪಹರಣ ಪ್ರಕರಣದಲ್ಲಿ ಇಂದು ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಅವರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆತನ ಪತ್ನಿ ಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ತುಂಬ ಒರಟಾಗಿ ಪ್ರತಿಕ್ರಿಯಿಸಿದ್ದಾರೆ. ನಾಗರಾಜ ಎಲ್ಲಿದ್ದಾನೆ ಎಂದು ಕೇಳಿದಾಗ, ನೀವು ಇರೋದ್ಯಾಕೆ, ಹುಡುಕಿಕೊಳ್ಳಿ ಎಂದು ಗರ್ವದಿಂದ ಉತ್ತರಿಸಿದ್ದಾರೆ.

ಏನಮ್ಮ ಮನೆಯಲ್ಲಿ ಇಷ್ಟೊಂದು ದುಡ್ಡು ಹೇಗೆ ಬಂತು ಎಂದರೆ, ನನಗೇನು ಗೊತ್ತು ನೀವೆ ತಂದಿಟ್ಟಿರಬಹುದು ಎಂದಿದ್ದಾರೆ. ನಾಗ ಎಲ್ಲಿ ಹೋದ ಹೇಳಮ್ಮ ಅಂದರೆ, ನಾನೇನು ತೊಡೆಯಲ್ಲಿ ಬಚ್ಚಿಟ್ಟುಕೊಂಡಿದ್ದೀನಾ ಹುಡುಕಿಕೊಳ್ಳಿ ನೀವೇ ಎಂದು ಸರಿಯಾಗಿ ಸ್ಪಂದಿಸದೆ, ನನಗೆ ತುಂಬ ತಲೆನೋವು ಇದೆ ಎಂದು ಹೇಳಿ ಜಾರಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin