ಅವಳನ್ನು ನಂಬಿಸಿ, ಪ್ರೀತಿಸಿ, ಅತ್ಯಾಚಾರವೆಸಗಿ, ಗರ್ಭಿಣಿ ಮಾಡಿ ಎಸ್ಕೇಪ್ ಆದ..!

ಈ ಸುದ್ದಿಯನ್ನು ಶೇರ್ ಮಾಡಿ

Rape-01

ಕೊಳ್ಳೇಗಾಲ,ಅ.22- ಯುವಕನೋರ್ವ ಅಪ್ರಾಪ್ತೆ ಅನಾಥ ಬಾಲಕಿಯೊಡನೆ ಪ್ರೀತಿ-ಪ್ರೇಮದ ನಾಟಕವಾಡಿ ನಂಬಿಸಿ ಆಕೆಯನ್ನು ನಿರಂತರ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ ಮಾಡಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಆಂಜನೇಯಪುರ ಬಡಾವಣೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.  ಗ್ರಾಮದ ಲೇ.ಪುಟ್ಟರಾಜು ಹಾಗೂ ಲಕ್ಷ್ಮಮ್ಮ ಎಂಬುವವರ ಕಿರಿಯ ಮಗಳನ್ನು ಅದೇ ಗ್ರಾಮದ ಮಾದದಾಸಶೆಟ್ಟಿ ಮಗ ಗಿರೀಶ ಎಂಬಾತ ವಹಿಸಿದ್ದಾನೆ. ಮಧುವನಹಳ್ಳಿ ಗ್ರಾಮದ ಆಂಜನೇಯಪುರ ಬಡಾವಣೆಯ ಲೇ.ಪುಟ್ಟರಾಜು ಹಾಗೂ ದಿ.ಲಕ್ಷ್ಮಮ್ಮ ದಂಪತಿಗಳಿಗೆ ಇಬ್ಬರು ಗಂಡು ಒಂದು ಹೆಣ್ಣು ಒಟ್ಟು ಮೂರು ಮಕ್ಕಳು ದಂಪತಿಗಳಿಬ್ಬರು ಅದಾಗಲೇ ತೀರಿಕೊಂಡಿದ್ದಾರೆ.

ಹಿರಿಯ ಮಗ ಸಂಜಯ್ ಬೆಂಗಳೂರಿನ ಟ್ರಾವೆಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಕಿರಿಯ ಮಗ ಸಿದ್ದಪ್ಪಸ್ವಾಮಿ ಕೂಲಿ ಮಾಡಿಕೊಂಡಿದ್ದಾನೆ. ದಂಪತಿಗಳಿಬ್ಬರು ತೀರಿಕೊಂಡ ನಂತರ ಮೂವರ ಮಕ್ಕಳ ಜವಾಬ್ದಾರಿ ಒಂದೇ ಊರಿನಲ್ಲಿದ್ದ ದಿ.ಲಕ್ಷ್ಮಮ್ಮನ ಅಕ್ಕ ರಾಜಮ್ಮಳ ಹೆಗಲಿಗೆ ಬಿತ್ತು. ಗಂಡು ಮಕ್ಕಳಿಬ್ಬರು ಅವರವರ ಕೆಲಸ ಮಾಡಿಕೊಂಡಿದ್ದರೆ ಕಿರಿಯ ಮಗಳು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದಳು.

ಪಟ್ಟಣದ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಗಿರೀಶ ಆಕೆ ಪರಿಚಯ ಮಾಡಿಕೊಂಡಿದ್ದಾನೆ. ಇಬ್ಬರು ಒಂದೇ ಗ್ರಾಮವಾದ್ದರಿಂದ ಬರುತ್ತಾ-ಬರುತ್ತಾ ಸಲಿಗೆ ಹೆಚ್ಚು ಬೆಳೆಸಿಕೊಂಡ ಗಿರೀಶ್ ಆಕೆಯೊಡನೆ ಪ್ರೀತಿ-ಪ್ರೇಮದ ನಾಟಕವಾಡಿ ನಂತರ ಬಾಲಕಿಯನ್ನು ಹೆದರಿಸಿ, ಬೆದರಿಸಿ ಆಕೆಯೊಡನೆ ದೈಹಿಕ ಸಂಪರ್ಕ ಮುಂದುವರೆಸಿದ್ದಾನೆ. ಮೂರುವರೆ ತಿಂಗಳ ಗರ್ಭಿಣಿ ಮಾಡಿ ಪರಾರಿಯಾಗಿದ್ದಾನೆ. ದಿನೇ ದಿನೇ ಆಕೆಯ ದೇಹದಲ್ಲಾಗುತ್ತಿರುವ ಬದಲಾವಣೆ ಗಮನಿಸಿದ ಬಾಲಕಿಯ ದೊಡ್ಡಮ್ಮ ರಾಜಮ್ಮಳಿಗೆ ಅದೆಲ್ಲೋ ಸಣ್ಣದಾಗಿ ಅನುಮಾನ ಮೂಡಿದೆ.
ರಾಜಮ್ಮ ಕೂಡಲೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆತಂದು ತೋರಿಸಿದಾಗ ಮೂರುವರೆ ತಿಂಗಳ ಗರ್ಭಿಣಿಯಾಗಿರುವುದಾಗಿ ದೃಢಪಡಿಸಿದ್ದಾರೆ.

ಬಾಲಕಿಯ ಪೋಷಕರು ಕೂಡಲೆ ಗ್ರಾಮದ ಸಮುದಾಯದ ಮಹಿಳಾ ಸಂಘಗಳ ಸದಸ್ಯರಿಗೆ ವಿಷಯ ಮುಟ್ಟಿಸಿದ್ದಾರೆ. ತಮ್ಮ ಗ್ರಾಮದ ಬಾಲಕಿಗಾದ ಅನ್ಯಾಯದ ವಿರುದ್ದ ಮರುಗಿದ ಗ್ರಾಮದ ಮಹಿಳಾ ಸಂಘಗಳ ಸದಸ್ಯರು ಸ್ಥಳಿಯ ಪಿಎಂಎಸ್‍ಆರ್ ಸಂಸ್ಥೆಯ ಸಂಯೋಜಕಿ ರತ್ನರವರಿಗೆ ತಿಳಿಸಿದ್ದಾರೆ. ರತ್ನ ಕುಟುಂಬಕ್ಕೆ ಧೈರ್ಯ ತುಂಬಿ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗೇಶ್‍ರವರ ಬಳಿ ಕರೆತಂದಿದ್ದಾರೆ.  ಬಾಲಕಿಯಿಂದ ವಿವರ ಪಡೆದ ಮಹಿಳಾ ಕಲ್ಯಾಣಾಧಿಕಾರಿ ನಾಗೇಶ್‍ರವರು ಇಲ್ಲಿನ ಗ್ರಾಮಾಂತರ ಠಾಣೆಗೆ ಬಂದು ಗಿರೀಶ್ ವಿರುದ್ದ ದೂರು ದಾಖಲಿಸಲಾಗಿದೆ.

ನಂತರ ಪ್ರಕರಣವನ್ನು ಸಿ.ಪಿ.ಐ ಅಮರನಾರಾಯಣ್‍ರವರಿಗೆ ವರ್ಗಾಯಿಸಿದ್ದು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿ.ಪಿ.ಐ ಅಮರನಾರಾಯಣ್‍ರವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.  ಏನು ಅರಿಯದ ಮುಗ್ದ ಅನಾಥ ಬಾಲಕಿಯೋರ್ವಳು ಓದಿ ಬದುಕು ಕಟ್ಟಿಕೊಳ್ಳಬೇಕಿದ್ದ ವಯಸ್ಸಲ್ಲಿ ಕಪಟಿ ಕಾಮುಕನ ವಂಚನೆಗೆ ಬಲಿಯಾಗಿ ಈಗ ಒಡಲಲ್ಲಿ ಬಸಿರೊತ್ತು ಚಾಮರಾಜನಗರದ ಬಾಲ ಮಂದಿರದಲ್ಲಿ ಸಂತ್ರಸ್ತೆಯಾಗಿ ಸೇರಿರುವುದು ಮಾತ್ರ ದುರಂತವೇ ಸರಿ.

► Follow us on –  Facebook / Twitter  / Google+

Facebook Comments

Sri Raghav

Admin