ಅವಳಿ ನಗರದಲ್ಲಿ ಸರಗಳ್ಳರ ಕಾಟ : ಚಿನ್ನಾಭರಣ ದೋಚಿ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

chain--snatcher

ಧಾರವಾಡ,ಆ.29- ರಸ್ತೆಯಲ್ಲಿ ನಡೆದು ಹೊರಟಿದ್ದ ಮಹಿಳೆಯೋರ್ವರ ಕೊರಳಲ್ಲಿದ್ದ 50 ಗ್ರಾಂ ಚಿನ್ನಾಭರಣವನ್ನು ಸರಗಳ್ಳರು ಎಗರಿಸಿ ಪರಾರಿಯಾದ ಘಟನೆಯೊಂದು ನಗರದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುವರ್ಣಾ ಆಟ್ರ್ಸ ಕಾಲೇಜನ ಎದುರಿಗೆ ಜರುಗಿದೆ.ಸ್ಥಳೀಯ ವಿದ್ಯಾಗಿರಿಯ ಸತ್ತೂರ ಕಾಲೋನಿ ನಿವಾಸಿ ಶ್ರೀಲಕ್ಷ್ಮೀ ಸುರೇಶಬಾಬು ಯಾದ್ರಿ ಎಂಬುವವರೇ ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದಾರೆ.

ನಿನ್ನೆ ಬೆಳಗಿನ 10 ಗಂಟೆಗೆ ಮನೆಯಿಂದ ನಡೆದುಕೊಂಡು ಸುವರ್ಣಾ ಆಟ್ರ್ಸ ಕಾಲೇಜ ಎದುರಿಗೆ ಹೊರಟಾಗ ಎದುರಿನಿಂದ ಮೋಟಾರ ಸೈಕಲ್‍ದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಶ್ರೀಲಕ್ಷೀ ಕೊರಳಲ್ಲಿದ್ದ 40 ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರ ಹಾಗೂ 10 ಗ್ರಾಂ ತೂಕದ ಚೈನನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಕುರಿತು ವಿದ್ಯಾಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

35 ಗ್ರಾಂ ಮಂಗಳಸೂತ್ರ ಅಪಹರಣ
ಹುಬ್ಬಳ್ಳಿ,ಆ.29- ರಸ್ತೆಯಲ್ಲಿ ನಡೆದುಕೊಂಡ ಹೊರಟಿದ್ದ ಮಹಿಳೆಯೊಬ್ಬರ 35 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಬೈಕ್ ಮೇಲೆ ಬಂದ ಸರಗಳ್ಳರು ಕಿತ್ತುಕೊಂಡು ಪರಾರಿಯಾದ ಘಟನೆಯೊಂದು ವಿದ್ಯಾನಗರ ಠಾಣೆ ವ್ಯಾಪ್ತಿಯ ಉಣಕಲ್ ಹೊಸೂರ ಬೈಪಾಸ್ ರೋಡ ಪ್ರಗತಿ ಕಾಲೋನಿ ಹತ್ತಿರ ನಿನ್ನೆ ರಾತ್ರಿ ನಡೆದಿದೆ. ಉಣಕಲ್‍ನ ಪ್ರಗತಿ ಕಾಲೋನಿ ನಿವಾಸಿ ಸುಜಾತಾ ಸುಭಾಸ ಪವಾರ ಎಂಬುವರೆ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ.  ನಿನ್ನೆ ರಾತ್ರಿ 10 ಗಂಟೆಗೆ ಉಣಕಲ್ ಹೊಸೂರ ಬೈಪಾಸ್ ರೋಡ ಪ್ರಗತಿ ಕಾಲೋನಿ ಹತ್ತಿರ ನಡೆದುಕೊಂಡು ಹೊರಟಾಗ ಎದುರಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತರು ಸುಜಾತಾ ಅವರ ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸರಗಳ್ಳರ ಶೋಧಕ್ಕೆ ಜಾಲ ಬೀಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin