ಅವಳ ಒಳ ಉಡುಪಿನಲ್ಲಿತ್ತು 61 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ತುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

panty-01

ನವದೆಹಲಿ, ನ.7- ತನ್ನ ಒಳ ಉಡುಪಿನಲ್ಲಿ 61 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ. ದುಬೈನಿಂದ ಏರ್ಪೋರ್ಟ್ ಕಳೆದ ಶುಕ್ರವಾರ ಆಗಮಿಸಿದ ಮಹಿಳೆಯನ್ನು ಗುಮಾನಿ ಮೇಲೆ ವಶಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದಾಗ ಅಕೆಯ ಡೆನಿಮ್ ಶಾಟ್ರ್ಸ್ ಒಳ ಉಡುಪಿನಲ್ಲಿ 42.75 ಲಕ್ಷ ರೂ. ಮೌಲ್ಯದ 1,400 ಗ್ರಾಂ ತೂಕದ 12 ಗೋಲ್ಡ್ ಬಾರ್ಗಳು ಪತ್ತೆಯಾದವು. ಅಲ್ಲದೇ ಈಕೆ ಧರಿಸಿದ್ದ ವಸ್ತ್ರದ ಹಿಂಬದಿ ಜೇಬುಗಳಲ್ಲಿ 18.62 ಲಕ್ಷ ರೂ. ಮಾಲ್ಯದ 785 ಗ್ರಾಂ ಚಿನ್ನಾಭರಗಳು ಸಹ ಕಂಡಬಂದವು. ಈಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.  ಕಳೆದ ಎರಡೂವರೆ ತಿಂಗಳ ಹಿಂದೆ ಇದೇ ರೀತಿ ದುಬೈನಿಂದ ಬಂದ ಮಹಿಳೆಯ ಒಳ ಉಡುಪಿನಲ್ಲಿದ್ದ ಚಿನ್ನದ ಬಾರ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin