ಅಶ್ವಿನ್ ಮ್ಯಾಜಿಕ್, ಕೊಹ್ಲಿ ಬಳಗಕ್ಕೆ 75 ರನ್’ ಗಳ ಭರ್ಜರಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Kohli

ಬೆಂಗಳೂರು, ಮಾ.7- ಇಲ್ಲಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಪುಣೆಯಲ್ಲಿ ಸೋತಿದ್ದ ಕೊಹ್ಲಿ ಬಳಗ ಸೇಡು ತೀರಿಸಿಕೊಂಡಿತು. ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಳ್ಕ ಸಾಧಿಸಿದವು.   188 ರನ್‍ಗಳ ಗುರಿ ಬೆನ್ನತ್ತಿದ್ದ ಆಸೀಸ್ ಭಾರತದ ಅಶ್ವಿನ್ 41 ಕ್ಕೆ 6 ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ 112 ರನ್ ಗೆ ಆಲೌಟ್ ಆಗಿ 75 ರನ್ ಗಳ ಹೀನಾಯ ಸೋಲನ್ನನುಭವಿಸಿತು.

ಇದಕ್ಕೂ ಮುನ್ನ 4 ವಿಕೆಟ್‍ಗೆ 213 ರನ್‍ಗಳಿಂದ ಆಟ ಮುಂದುವರಿಸಿದ ಚೇತೇಶ್ವರ ಪೂಜಾರ ಹಾಗೂ ರಹಾನೆ ಜೋಡಿಯು 5ನೆ ವಿಕೆಟ್‍ಗೆ ಅಮೂಲ್ಯ 118 ಸೇರಿಸಿ ತಂಡವನ್ನು ಅಪಾಯದಿಂದ ಕಾಪಾಡುವ ಮುನ್ಸೂಚನೆ ನೀಡಿದರು.  ನಿನ್ನೆ ತಂಡಕ್ಕೆ ಆಧಾರ ಸ್ತಂಭವಾಗಿದ್ದ ಈ ಜೋಡಿಯು ಇಂದು ಹೆಚ್ಚು ರನ್ ಬಾರಿಸಿ ತಂಡದ ರನ್ ಹೆಚ್ಚಿಸಲು ಯತ್ನಿಸುವ ಗುರಿ ಹೊಂದಿತ್ತು. ಆದರೆ, ಇದಕ್ಕೆ ಸ್ಟಾರ್ಕ್ ಆಸ್ಪದ ನೀಡಲಿಲ್ಲ.   ಭಾನುವಾರದ ಮೊತ್ತಕ್ಕೆ 12 ರನ್ ಸೇರಿಸಿ ಅರ್ಧಶತಕ ಪೂರೈಸಿದ ರಹಾನೆ ತಂಡದ ಮೊತ್ತ 238 ರನ್ ಆಗಿದ್ದಾಗ ಸ್ಟಾರ್ಕ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು.

ರಹಾನೆ ಔಟಾಗುತ್ತಿದ್ದಂತೆ ಕ್ರೀಜ್‍ಗೆ ಬಂದ ಕನ್ನಡಿಗ ಕರುಣ್ ನಾಯರ್ (0) ಸಂಪಾದಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಅದೇ ಓವರ್‍ನಲ್ಲೇ ಸ್ಟಾರ್ಕ್‍ಗೆ ಬಲಿಯಾದರು.
ಒಂದೇ ಓವರ್‍ನಲ್ಲಿ 2 ವಿಕೆಟ್ ಉರುಳಿಸಿದ ಸ್ಟಾರ್ಕ್ ಭಾರತ ತಂಡಕ್ಕೆ ಅಪಾಯ ತಂದೊಡ್ಡಿದರು.
ಶತಕ ವಂಚಿತ ಪೂಜಾರ:

ಎರಡು ದಿನಗಳಿಂದ ಬೌಲರ್‍ಗಳಿಗೆ ನೆರವಾಗಿದ್ದ ಪಿಚ್‍ನಲ್ಲಿ ರಹಾನೆ ಸಾಥ್ ತೆಗೆದುಕೊಂಡು ಪೂಜಾರ (79) ಚೇತರಿಕೆ ಆಟವಾಡುವ ಮೂಲಕ ತಂಡದ ರಕ್ಷಣೆಗೆ ನಿಂತಿದ್ದರು.
ಇಂದು ಕೂಡ ಅಂತಹದ್ದೇ ಆಟವಾಡಿ ರನ್ ಗಳಿಸಬೇಕೆಂಬ ಬಯಕೆ ಹೊಂದಿದ್ದ ಪೂಜಾರ ಸೋಮವಾರ ಮೊತ್ತಕ್ಕೆ ಕೇವಲ 13 ರನ್ ಬಾರಿಸಿ ಶತಕದಿಂದ ವಂಚಿತರಾದರು.
ಉತ್ತಮವಾಗಿ ಆಟವಾಡುತ್ತಿದ್ದ ಪೂಜಾರ 92, ಹೇಜಲ್‍ವುಡ್ ಬೌಲಿಂಗ್‍ನಲ್ಲಿ ಮಿಚಲ್ ಮಾರ್ಷಲ್‍ಗೆ ಕ್ಯಾಚಿತ್ತು ನಿರ್ಗಮಿಸಿದರು.  ಪೂಜಾರ ಔಟಾಗುತ್ತಿದ್ದಂತೆ ಕೆಳ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಅಶ್ವಿನ್ (4), ಉಮೇಶ್ ಯಾದವ್ (1) ಮತ್ತು ಇಶಾಂತ್ ಶರ್ಮ (6) ಅವರ ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ವಿಕೆಟ್ ಕೀಪರ್ ಸಹಾ ಅಜೇಯ 20 ರನ್ ದಾಖಲಿಸಿ ತಂಡದ ಅಲ್ಪ ಮೊತ್ತವನ್ನು ಹೆಚ್ಚಿಸಿದರು.

ವಿರಾಮಕ್ಕೂ ಮುನ್ನ ಭಾರತ ಕೊನೆಯ 61 ರನ್‍ಗೆ ದಿಢೀರ್ 6 ವಿಕೆಟ್ ಕಳೆದುಕೊಂಡು ಭಾರೀ ನಿರಾಸೆ ಅನುಭವಿಸಿತು.   ಈ ಸರಣಿಯ ಸತತ 4ನೆ ಇನ್ನಿಂಗ್ಸ್‍ನಲ್ಲಿ ಭಾರತ ಅಲ್ಪ ರನ್‍ಗಳಿಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಬೇಗನೆ ವಿಕೆಟ್ ಕಳೆದುಕೊಂಡಿರುವುದು ದುರದೃಷ್ಟಕರ. ಅಂತಿಮವಾಗಿ ಭಾರತ 97.1 ಓವರ್‍ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 274 ರನ್‍ಗಳಿಗೆ ಇನ್ನಿಂಗ್ಸ್ ಮುಗಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin