ಅಸಂಬ್ಲಿಯಲ್ಲಿರುವವರೆಲ್ಲರ ಬಳಿ ಈಗಾಗಲೇ ಚಿನ್ನದ ಬಿಸ್ಕೆಟ್ ಗಳಿವೆ ಮತ್ತೆ ಕೊಡೋದೇನಕ್ಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj--02

ಹುಬ್ಬಳ್ಳಿ,ಅ.16-ಅಸಂಬ್ಲಿಯಲ್ಲಿರುವ ಇರುವವರೆಲ್ಲ ಚಿನ್ನದ ಬಿಸ್ಕೆಟ್ ಹೊಂದಿರುವವರೇ ಅಂಥವರಿಗೆ ಮತ್ತೆ ಚಿನ್ನದ ಬಿಸ್ಕೆಟ್ ನೀಡುವುದು ಸರಿಯಲ್ಲ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿಶ್ವೇಶ್ವರನಗರದಲ್ಲಿರುವ ನಾಡೋಜ ಪಾಟೀಲ್ ಪುಟ್ಟಪ್ಪ ಅವರ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ವಿಧಾನಸಭೆಯ ವಜ್ರಮಹೋತ್ಸವ ಬೇಕಾಗಿರಲಿಲ್ಲ. ಎಲ್ಲರಿಗೂ ಚಿನ್ನದ ಬಿಸ್ಕೆಟ್ ನೀಡುವ ಅಗತ್ಯವಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಮಹದಾಯಿ, ಕಳಸಾಬಂಡೂರಿ ಯೋಜನೆ ಜಾರಿಗಾಗಿ ದೀರ್ಘಕಾಲದ ಹೋರಾಟ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ವಿರೋಧಿಸಿ ಅ.21ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ಬಿಟ್ಟರೆ ರಾಜ್ಯದ ಅಭಿವೃದ್ದಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಮಹದಾಯಿ ಬಗ್ಗೆ ಅವರು ಮಧ್ಯಸ್ಥಿಕೆ ವಹಿಸಬೇಕಾಗಿತ್ತು. ಅವರು ಈ ಕೆಲಸ ಮಾಡದೆ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಗುಡುಗಿದ್ದಾರೆ.

Facebook Comments

Sri Raghav

Admin