ಅಸ್ಸಾಂನಲ್ಲಿ ಐದು ಬಾಂಬ್ ಆಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

aSSAM

ತಿನ್‍ಸುಕಿಯಾ(ಅಸ್ಸಾಂ), ಆ.15– ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಸ್ವಾತಂತ್ರ್ಯ ದಿನಾ ಚರಣೆ ಸಂದರ್ಭದಲ್ಲಿ ಶಂಕಿತ ಉಲ್ಫಾ ಉಗ್ರಗಾಮಿಗಳು ವಿವಿಧೆಡೆ ಐದು ಬಾಂಬ್‍ಗಳನ್ನು ಸ್ಫೋಟಿಸಿದ್ದಾರೆ. ಈ ಸ್ಫೋಟಗಳಲ್ಲಿ ಸಾವು-ನೋವು ಅಥವಾ ಹಾನಿ ಬಗ್ಗೆ ವರದಿಗಳು ಲಭಿಸಿಲ್ಲ. ತಿನ್‍ಸುಕಿಯಾ ಪಟ್ಟಣದ ಜಿಲ್ಲಾ ಕೇಂದ್ರದ ಹೊರವಲಯದ ಲಾಯಿಪುಲಿಯ ಇಂದಿರಾಗಾಂಧಿ ಶಾಲೆ ಬಳಿ ಇಂದು ಬೆಳಿಗ್ಗೆ 7.15ರಲ್ಲಿ ಸುಧಾರಿತ ಸ್ಫೋಟಕವೊಂದು ಆಸ್ಫೋಟಗೊಂಡಿತು. ಇದಾದ ಬಳಿಕ ದೂಮ್‍ದೂಮಾ ಪ್ರದೇಶದ ಬದ್ಲಾಭಟ ಚಹಾ ತೋಟದ ಬಳಿ ಇನ್ನೊಂದು ಸ್ಫೋಟ ಸಂಭವಿಸಿತು. ಮಸುವಾ ಬಡಾವಣೆಯಲ್ಲೂ ಬಾಂಬೊಂದು ಸ್ಫೋಟಗೊಂಡ ವರದಿಯಾಗಿದೆ.  ಈ ಪ್ರದೇಶದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin