ಅಸ್ಸಾಂನಲ್ಲಿ ‘ತ್ರಿ’ವಿಕ್ರಮ ಭಾಷಣ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--001

ಗುವಾಹಟಿ. ಮೇ.26 : ಕೇಂದ್ರ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಾಟಿಯಲ್ಲಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ನಮಗೆ ದೇಶದ ಮೂಲೆ, ಮೂಲೆಯೂ ದೆಹಲಿಯೇ. ನೀವು ನಮಗೆ ಪೂರ್ಣ ಬಹುಮತದ ಸರ್ಕಾರ ನೀಡಿದ್ದೀರಿ. ನಾವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ.ಆದರೆ ಹಿಂದಿನ ಸರ್ಕಾರಕ್ಕೆ ಅದು ಕೇಳಿಸುತ್ತಿರಲಿಲ್ಲ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಇದು 2 ನೇ ಹಸಿರು ಕ್ರಾಂತಿಯಲ್ಲ ಆದರೆ ನಿರಂತರ ಕ್ರಾಂತಿ ಆಗಲಿದೆ ಎಂದು ಅಸ್ಸಾಂನಲ್ಲಿಂದು ಮೋದಿ ಹೇಳಿದ್ದಾರೆ.

ಕೃಷಿ ಸಂಶೋಧನಾ ಸಂಸ್ಥೆ ಅಸ್ಸಾಂಗೆ ವರದಾನವಾಗಿದೆ. ಸಾವಯವ ಕೃಷಿ ಮಾಡಲು ನಮ್ಮ ದೇಶಕ್ಕೆ ಅಪಾರ ಸಾಮರ್ಥ್ಯವಿದೆ. ಅದರಲ್ಲೂ ಈಶಾನ್ಯ ಭಾರತಕ್ಕೆ ಇನ್ನೂ ಹೆಚ್ಚಿನ ಸಾಮರ್ಥ್ಯವಿದೆ ಎಂದರು. ಇದೆ ವೇಳೆ ಕೇಂದ್ರ ಸರ್ಕಾರದ ನೂತನ ಯೋಜನೆ ‘ಸಂಪದ’ ಘೋಷಿಸಿದರು. ಈ ಯೋಜನೆ ಕೃಷಿ ಉತ್ಪನ್ನಗಳಿಗೆ ನಿಗದಿತ ಬೆಲೆಯನ್ನು ನೀಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin