ಅಸ್ಸಾಂನಲ್ಲಿ 2 ಬಾರಿ ಕಂಪಿಸಿದ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

Assam

ಗುವಾಹತಿ, ಆ.23-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಂದು ಮುಂಜಾನೆ ಎರಡು ಬಾರಿ ಭೂಕಂಪಗಳು ಸಂಭವಿಸಿದ್ದು, ಸಾವು-ನೋವು, ಆಸ್ತಿ-ಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ. ಅಸ್ಸಾಂ ರಾಜಧಾನಿ ಗುವಾಹತಿ ಮತ್ತು ಇತರ ಸ್ಥಳಗಳಲ್ಲಿ ಇಂದು ಮುಂಜಾನೆ 5.30 ಮತ್ತು 7.15ರಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಗೆ ಬಂದರು. ರಿಕ್ಟರ್ ಮಾಪಕದಲ್ಲಿ ಈ ಎರಡು ಭೂಕಂಪದ ತೀವ್ರತೆ ಕ್ರಮವಾಗಿ 3.1 ಮತ್ತು 5.5 ರಷ್ಟು ದಾಖಲಾಗಿತ್ತು. ಭೂಕಂಪನಗಳಿಂದ ಸದ್ಯಕ್ಕೆ ಯಾವುದೇ ಸಾವು-ನೋವು, ಆಸ್ತಿ ಹಾನಿ ಬಗ್ಗೆ ವರದಿಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin