ಅಸ್ಸಾಂ : ಭದ್ರತಾಪಡೆ ಎನ್‍ಕೌಂಟರ್’ಗೆ 6 ಕೆಪಿಟಿಎಲ್ ಉಗ್ರರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

6Killed

ಡಿಫು, ಸೆ.23-ಅಸ್ಸಾಂನ ಕರ್ಬಿ ಅಂಗ್‍ಲೊಂಗ್ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಗಡಿ ಭದ್ರತಾಪಡೆ ಜೊತೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್ಸ್ (ಕೆಪಿಟಿಎಲ್) ಸಂಘಟನೆಯ ಕನಿಷ್ಟ ಆರು ಉಗ್ರಗಾಮಿಗಳು ಹತರಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೆ ತೀವ್ರ ಗಾಯಗಳಾಗಿವೆ.  ಉಗ್ರಗಾಮಿಗಳಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಸೇನೆ ಮತ್ತು ಯೋಧರ ಜಂಟಿ ತಂಡವು ಬೋಕೊಜಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬನಿಪತ್ತರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಆಗ ಉಗ್ರಗಾಮಿಗಳು ಭದ್ರತಾಪಡೆಗಳ ಮೇಲೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕೆಪಿಟಿಎಲ್‍ನ ಇಬ್ಬರು ಅಗ್ರ ನಾಯಕರೂ ಸೇರಿದಂತೆ ಆರು ಉಗ್ರರು ಹತರಾದರು. ಎನ್‍ಕೌಂಟರ್‍ನಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದೇವಜಿತ್ ದ್ಯೂರಿ ತಿಳಿಸಿದ್ದಾರೆ.

ಹತರಾದ ಉಗ್ರರ ಬಳಿ ಇದ್ದ ಒಂದು ಎಸ್‍ಎಲ್‍ಆರ್ ರೈಫಲ್, ಒಂದು ಇನ್‍ಸಾಸ್ ಬಂದೂಕು, ಮೂರು ಪಿಸ್ತೂಲುಗಳು ಮತ್ತು ಎರಡು ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ತೀವ್ರ ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ಬೇಟೆ ಕಾರ್ಯಾಚರಣೆ ತೀವ್ರಗೊಂಡಿದೆ.

 

Facebook Comments

Sri Raghav

Admin