ಅಹಿಂಸಾ ಮಾರ್ಗದಿಂದ ಜೀವನ ಸಾಗಿಸಿ

ಈ ಸುದ್ದಿಯನ್ನು ಶೇರ್ ಮಾಡಿ

6

ರೋಣ,ಫೆ.7- ಜೈನಧರ್ಮವು ಸುಮಾರು ವರ್ಷಗಳ ಇತಿಹಾಸ ಹೊಂದಿದ್ದು, ಅದಕ್ಕೆ ತನ್ನದೆ ಆದ ಮೂಲ ಸಿದ್ದಾಂತಗಳು ಇವೆ ಎಂದು ತಾಲೂಕು ಜೈನ ಸಮಾಜದ ಅಧ್ಯಕ್ಷ ನೇಮಿನಾಥ ಮುತ್ತಿನ ಹೇಳಿದರು.ಅವರು ನಿನ್ನೆ ಪಟ್ಟಣದ ಜೈನ ಬಸಿದಿಯಲ್ಲಿ ಭಗವಾನ್ 1008 ಪಾಶ್ರ್ವನಾಥ ತೀರ್ಥಂಕರರ ಹಾಗೂ 24 ತೀರ್ಥಂಕರರ 14ನೇ ವರ್ಷದ ವಾರ್ಷಿಕ ಪೂಜ ಹಾಗೂ ನೂತನ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದರು.ಜೈನ ಧರ್ಮದಲ್ಲಿರುವ ಮೂಲ ನಿಯಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಮುನಿಗಳ ಆಚರಣಿಯು ನಮ್ಮ ಮುಂದಿನ ಪೀಳಿಗೆಗೆ ತಿಳಿಯುತ್ತದೆ. ಮೋಕ್ಷಕ್ಕಾಗಿ ಇರುವ ನಿಯಮಗಳನ್ನಾದರೂ ಆಚರಿಸಬೇಕು ಎಂದರು.ಧರ್ಮದ ಸಿದ್ದಾಂತದ ಪ್ರಕಾರ ಅಹಿಂಸೆಯನ್ನು ಪಾಲನೆ ಮಾಡಲೇಬೇಕು, ಜೀವನದಲ್ಲಿ ನಿಮ್ಮ ಮಕ್ಕಳಿಗೆ ಪ್ರತಿಯೊಬ್ಬರೂ ವಿದ್ಯೆ ಕಲಿಸಬೇಕು.

ವಿದ್ಯೆ ಶಾಶ್ವತ ಆಸ್ತಿ. ಹೀಗಾಗಿ ಸಮಾಜ ಭಾಂದವರು ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗುರುಪಾದ ದೇವರು ಮಾತನಾಡಿ, ಪ್ರತಿ ಸಮುದಾಯದವರು ಪರಸ್ಪರ ಪ್ರೀತಿ ಸೌಹಾರ್ಧತೆಯಿಂದ ಬದುಕಿದಾಗ ಮಾತ್ರ ಸಮಾಜವು ಸುಗಮವಾಗಿ ಸಾಗಲು ಸಾಧ್ಯ. ಜೀವನದಲ್ಲಿ ಅಹಿಂಸಾ ಮಾರ್ಗದಲ್ಲಿ ನಡೆದಾಗ ಮಾತ್ರ ಮೋಕ್ಷ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಎ.ಎಸ್. ಹೊಸಮನಿ ಮಾತನಾಡಿ ಜೈನ ಧರ್ಮದ ಆಚರಣೆ, ಸಿದ್ದಾಂತಗಳನ್ನು ಸ್ವವಿವರವಾಗಿ ಹೇಳಿದರು. ಸಮಾಜದ ಹಿರಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗದಗ ಜೈನ ಸಮಾಜದ ಅಧ್ಯಕ್ಷ ಬಿ.ಎಸ್. ನಾವಳ್ಳಿ, ಬಿ.ಪಿ. ಹುಬ್ಬಳ್ಳಿ, ದುಂಡಪ್ಪ ಜೂಜಿನ, ಚಂದ್ರನಾಥ ಮುತ್ತಿನ, ಎಸ್.ಎಚ್. ರಡ್ಡೇರ, ಬಾಬು ಮುತ್ತಿನ, ಶ್ರೀಪಾಲ .ಕೆ, ಆನಂದರಾಜ ಹೊಸಮನಿ ಸೇರಿದಂತೆ ಸಮಾಜದ ಶ್ರಾವಕ, ಶ್ರಾವಕಿಯರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin