ಅ.1 ರಂದು ಹಾವೇರಿಯಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಬೃಹತ್ ನ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Sangolli-Rayannaಬೆಂಗಳೂರು,ಆ.26-ಹಿಂದು ಸಮುದಾಯಗಳನ್ನು ಒಂದುಗೂಡಿಸಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ಕನಸಿನೊಂದಿಗೆ ಹಿರಿಯ ನಾಯಕ ಈಶ್ವರಪ್ಪ ಸ್ಥಾಪಿಸಲು ಹೊರಟಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್ಗೆ ಆರೆಸ್ಸೆಸ್ ಪ್ರಮುಖರು ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಅಕ್ಟೋಬರ್ 1 ರಂದು ಬ್ರಿಗೇಡ್ನ ಮೊಟ್ಟ ಮೊದಲ ಬೃಹತ್ ಸಮಾವೇಶ ಹಾವೇರಿಯಲ್ಲಿ ನಡೆಯಲಿದೆ. ಸಮಾವೇಶಕ್ಕೆ ಪೂರ್ವಭಾವಿಯಾಗಿ ಆಗಸ್ಟ್ 31 ರಂದು ಕೂಡಲಸಂಗಮದಲ್ಲಿ ಹಿಂದ ನಾಯಕರ ಮಹತ್ವದ ಸಭೈ ನಡೆಯಲಿದ್ದು ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ರೂಪು ರೇಷೆಗಳನ್ನು ನಿರ್ಧರಿಸಲಿದ್ದಾರೆ.

ಹಿಂದುಳಿದ ಹಾಗೂ ದಲಿತ ಸಮುದಾಯಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಆರಂಭಿಸಲು ಉದ್ದೇಶಿಸಲಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಗ್ರೀನ್ ಸಿಗ್ನಲ್ ನೀಡಿರುವ ಸಂಘ ಪರಿವಾರದ ನಾಯಕರು,ಈ ಯತ್ನವನ್ನು ಬೆಂಬಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎಂದು ತಾರಾಪ್ರಭ ಮೀಡಿಯಾ ಹೌಸ್ಗೆ ಉನ್ನತ ಮೂಲಗಳು ಹೇಳಿವೆ.
ಸಂಘ ಪರಿವಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಪಡೆಯ ಸ್ಥಾಪನೆಯ ಕುರಿತು ಎದ್ದಿದ್ದ ಊಹಾಪೋಹಗಳಿಗೆಲ್ಲ ತೆರೆ ಬಿದ್ದಂತಾಗಿದ್ದು,ಇದೀಗ ಅಕ್ಟೋಬರ್ 1 ರಂದು ಹಾವೇರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.

ಈ ಮುನ್ನ ಸೆಪ್ಟೆಂಬರ್ 26 ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಮೊಟ್ಟ ಮೊದಲ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತಾದರೂ ಸೆಪ್ಟೆಂಬರ್ 16 ರ ನಂತರ ಪಿತೃ ಪಕ್ಷ ಆರಂಭವಾಗಲಿದ್ದು 30 ರಂದು ಮುಗಿಯಲಿರುವುದರಿಂದ ತದ ನಂತರ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಹೀಗಾಗಿ ಮೂವತ್ತರಂದು ನಡೆಯಲಿರುವ ಮಹಾಲಯ ಅಮಾವಾಸ್ಯೆಯ ನಂತರ ಅಕ್ಟೋಬರ್ 1 ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.  ಈ ಮಧ್ಯೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಸಂಘಪರಿವಾರದ ರಾಷ್ಟ್ರೀಯ ನಾಯಕರ ಸೂಚನೆಯ ಹಿನ್ನೆಲೆಯಲ್ಲಿ ಈಗ, ಈಶ್ವರಪ್ಪ ಅವರ ಯತ್ನಕ್ಕೆ ವಿರೋಧ ವ್ಯಕ್ತಪಡಿಸದಿರಲು ನಿರ್ಧರಿಸಿದ್ದಾರೆ.

ರಾಯಣ್ಣ ಬ್ರಿಗೇಡ್ ಸಭೆ

ಹಾವೇರಿ,ಆ.26-ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಸಮಾವೇಶ ಕುರಿತಂತೆ ಇಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಇಲ್ಲಿನ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆಯಿತು.   ಮಾಜಿ ಸಂಸದ ವಿರೂಪಾಕ್ಷಪ್ಪ , ಅಹಿಂದ ಮುಖಂಡ ಮುಕುಡಪ್ಪ ಸೇರಿದಂತೆ ಹಲವು ಕುರುಬ ಸಮುದಾಯದ ನಯಕರು ಇದರಲ್ಲಿ ಪಾಲ್ಗೊಂಡಿದ್ದರು.   ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಯಾವುದೆ ನಾಯಕರು ಪಕ್ಷದ ಅಡಿಯಲ್ಲೇ ಸಭೆ ಸಮಾರಂಭ ನಡೆಸಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಅದನ್ನು ಈಶ್ವರಪ್ಪ ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡರು, ಕೆಲ ಜನಪ್ರತಿನಿಧಿಗಳು ಸೆಡ್ಡು ಹೊಡೆದಿದ್ದಾರೆ.  ಇಂದು ನಡೆಯುವ ಸಭೆಯಲ್ಲಿ ಸಮಾವೇಶದ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin