ಅ.12 ರಿಂದ 21ರವರೆಗೆ ದಿನದ 24 ಗಂಟೆಯೂ ಹಾಸನಾಂಬೆ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Hasanabha
ಹಾಸ,ಅ.8- ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ದರ್ಶನ ಮಹೋತ್ಸವ ಈ ಬಾರಿ ಅ.12ರಿಂದ 21ರವರೆಗೆ ನಡೆಯಲಿದೆ. ಇದನ್ನು ಹಿಂದೆಂದಿಗಿಂತ ಅಚ್ಚುಕಟ್ಟಾಗಿ ಸಂಘಟಿಸಿ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ವರ್ಷ ಒಟ್ಟಾರೆ 11 ದಿನ ದೇವಾಲಯದ ಬಾಗಿಲು ತೆರೆಯಲಿದ್ದು, ಸಾರ್ವಜನಿಕರಿಗೆ 9 ದಿನಗಳ ಕಾಲ ದರ್ಶನಕ್ಕೆ ಅವಕಾಶ ದೊರೆಯಲಿದೆ.

ದಿನದ 24 ಗಂಟೆಗಳು ದರ್ಶನ ಅವಕಾಶ : ಪ್ರತಿ ವರ್ಷ ಭಕ್ತರ ಆಗಮನ ಹೆಚ್ಚುತ್ತಲೇ ಇರುವುದರಿಂದ ಪೂಜಾ ಅವಧಿ ಹೊರತುಪಡಿಸಿ ದಿನದ 24 ಗಂಟೆ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶ ಒದಗಿಸಬೇಕು. ಪೂಜೆಗಾಗಿ ಸುದೀರ್ಘ ಅವಧಿ ಬಳಸಿ ಧಾರ್ಮಿಕ ವಿಧಿ-ವಿಧಾನ ಪೂರೈಕೆಗೆ ಬೇಕಾಗಿರುವ ಕನಿಷ್ಠ ಅವಧಿಯನ್ನಷ್ಟೇ ಬಳಸುವಂತೆ ಅರ್ಚಕ ಸಮುದಾಯಕ್ಕೆ ಸೂಚನೆ ನೀಡಲಾಗಿದೆ.

Facebook Comments

Sri Raghav

Admin