ಅ.2ಕ್ಕೆ ಉಚಿತ ಬಂಜೆತನ ತಪಾಸಣಾ ಶಿಬಿರ

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ, ಸೆ.28- ಬೆಂಗಳೂರು ಬಸವನಗುಡಿ ಗರ್ಭಗುಡಿ ಐ.ವಿ.ಎಫ್. ಸೆಂಟರ್ ಮತ್ತು ರೋಟರಿಕ್ಲಬ್‍ನ ಜಂಟಿ ಆಶ್ರಯದಲ್ಲಿ ಪಟ್ಟಣದ ರೋಟರಿ ಭವನದಲ್ಲಿ ಅ.2ರಂದು  ಸ್ತ್ರೀಯರಿಗೆ ಉಚಿತ ಬಂಜೆತನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅಧ್ಯಕ್ಷ ಮುರಡಿ ಗಿರೀಶ್ ತಿಳಿಸಿದ್ದಾರೆ.ಅಂದು ಬೆಳಿಗ್ಗೆ 9ರಿಂದ ಮದ್ಯಾಹ್ನ 3 ಗಂಟೆಯವರೆಗೆ ಜರುಗುವ ತಪಾಸಣಾ ಶಿಬಿರದಲ್ಲಿ ಖ್ಯಾತ ತಜ್ಞರಾದ ಡಾ.ಆಶಾ ಎಸ್.ವಿಜಯ್ ತಂಡ ಮತ್ತು ಪರಿಣಿತ ವೈದ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಬಂಜೆತನ ನಿವಾರಣೆಗಾಗಿ ಉಚಿತ ಸಲಹೆ ಮತ್ತು ಸಹಕಾರವನ್ನು ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಂಡು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಅವರು ತಿಳಿಸಿದರು.ಹೆಚ್ಚಿನ ವಿವರಗಳಿಗಾಗಿ ರೋಟರಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್ ದೂರವಾಣಿ ಸಂಖ್ಯೆ 9900628444, 9448104249 ಸಂಪರ್ಕಿಸಲು ಕೋರಲಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin