ಅ.28ರಂದು ನಡೆಯಬೇಕಿದ್ದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ದಿಢೀರ್ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

congrees

ಬೆಂಗಳೂರು, ಅ.26- ಕಾಂಗ್ರೆಸ್ ಪಕ್ಷದ ಸಂಘಟನೆ, ಚುನಾವಣೆ ತಯಾರಿ, ನಿಗಮ ಮಂಡಳಿ ನೇಮಕಾತಿ ಹಾಗೂ ವಿಧಾನಪರಿಷತ್ ಸದಸ್ಯರ ನಾಮನಿರ್ದೇಶನ ಸಂಬಂಧ ಚರ್ಚಿಸಲು ಅ.28ರಂದು ನಡೆಯ ಬೇಕಿದ್ದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ದಿಢೀರ್ ಮುಂದೂಡಿಕೆ ಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಆರು ವರ್ಷ ಅಧ್ಯಕ್ಷರಾಗಿ ಅಧಿಕಾರ ಪೂರೈಸಿದ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸುರಾಜ್ ಸಮಾವೇಶದ ನಂತರ ಶುಕ್ರವಾರ ನಡೆಯಬೇಕಿದ್ದ ಸಮನ್ವಯ ಸಮಿತಿ ಸಭೆಯನ್ನು ಮುಂದೂಡಲಾಗಿದೆ.ದೀಪಾವಳಿ ಹಬ್ಬದ ಅಂಗವಾಗಿ ಸಾಲು ಸಾಲು ರಜೆಗಳು ಬರುತ್ತಿದ್ದು, ಹಬ್ಬದ ಹಿಂದಿನ ದಿನ ಸಮನ್ವಯ ಸಮಿತಿ ಸಭೆ ನಡೆಸುವುದು ಬೇಡ ಎಂದು ಮುಖಂಡರು ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.

ಮುಂದಿನ ತಿಂಗಳು ಸಭೆ ನಡೆಸುವ ಸಾಧ್ಯತೆಗಳಿದ್ದು, ಆ ಸಂದರ್ಭದಲ್ಲಿ ಪಕ್ಷದ ಸಮನ್ವಯತೆ, ಚುನಾವಣೆ ತಯಾರಿ ಮತ್ತಿತರ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.ನಿಗಮ ಮಂಡಳಿ ನೇಮಕಾತಿಗೂ ಮುನ್ನ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸುವ ಸಲುವಾಗಿಯೇ ಸಭೆ ಕರೆಯಲಾಗಿತ್ತು. ಆದರೆ, ಕಾಲಾವ ಕಾಶದ ಕೊರತೆಯ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದ್ದು, ನೇಮಕಾತಿಯ ಸಂಪೂರ್ಣ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.

ಈಗಾಗಲೇ ಸಿದ್ದಪಡಿಸಿರುವ ಪಟ್ಟಿಗೆ ಹೈಕಮಾಂಡ್ ಅನುಮತಿ ನೀಡಿರುವುದರಿಂದ ಆಯಾ ಇಲಾಖೆಗೆ ಪಟ್ಟಿಯನ್ನು ರವಾನಿಸಿ ಶೀಘ್ರವೇ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಹೇಳಲಾಗುತ್ತಿದೆ.ಆದರೆ, ಇನ್ನು ಕೆಲವು ಮೂಲಗಳ ಪ್ರಕಾರ ಸಮನ್ವಯ ಸಮಿತಿಯಲ್ಲಿ ಚರ್ಚಿಸಿದರೆ ನೇಮಕಾತಿ ಮಾಡಿ ದರೆ ವಿವಾದಕ್ಕೀಡಾಗುವ ಸಾಧ್ಯತೆ ಇರುವುದರಿಂದ ಮುಂದಿನ ತಿಂಗಳು ನಡೆಯುವ ಸಭೆಯ ನಂತರವೇ ನೇಮಕಾತಿ ಆದೇಶ ಹೊರಡಿಸು ವಂತೆಯೂ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin