ಅ.4ರಿಂದ ರೈತ ದಸರಾ

ಈ ಸುದ್ದಿಯನ್ನು ಶೇರ್ ಮಾಡಿ

Dasara01

ಮೈಸೂರು, ಸೆ.23-ಅ.4ರಿಂದ ನಗರದಲ್ಲಿರುವ ಜೆ.ಕೆ.ಮೈದಾನದಲ್ಲಿ ರೈತ ದಸರಾ ಆಯೋಜಿಸಲಾಗಿದೆ.ಈ ಬಗ್ಗೆ ರೈತ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ಶಿವಶಂಕರ್ ಮಾಹಿತಿ ನೀಡುತ್ತಾ, ಅ.4ರಿಂದ 6ರವರೆಗೆ ರೈತ ದಸರಾ ನಡೆಯಲಿದೆ ಎಂದರು.ಅ.4ರಂದು ಬೆಳಗ್ಗೆ 9.30ಕ್ಕೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ರೈತ ದಸರಾವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹೇವಪ್ಪ ಉದ್ಘಾಟಿಸಲಿದ್ದಾರೆ.  ಬೆಳಗ್ಗೆ 10.30ಕ್ಕೆ ಜೆ.ಕೆ.ಮೈದಾನದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.ಅ.6ರಂದು ನಡೆಯುವ ಹಾಲು ಕರೆಯುವ ಸ್ಪರ್ಧೆಯನ್ನು ಪಶುಸಂಗೋಪನಾ ಸಚಿವ ಎ.ಮಂಜು ಉದ್ಘಾಟಿಸಲಿದ್ದಾರೆಂದರು.ಇದೇ ವೇಳೆ ಕೆಸರುಗದ್ದೆ ಓಟ, ಗುಂಡು ಎಸೆತ, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮಹಿಳೆಯರಿಗಾಗಿ ನೀರು ತುಂಬಿದ ಕೊಡಗಳನ್ನು ಹೊತ್ತು ಓಡುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin