ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

anjanaiah

ಹುಳಿಯಾರು,ಆ.29- ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಡೆ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ನಡೆಯಿತು.ಗ್ರಾಮ ದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮ, ಶ್ರೀರಂಗನಾಥಸ್ವಾಮಿ ದೇವರುಗಳು ಆಗಮಿಸಿದ್ದವು. ಶ್ರೀ ಆಂಜನೇಯಸ್ವಾಮಿಗೆ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು. ಕುಟುಂಬ ಸಮೇತರಾಗಿ ಬಂದು ಸ್ವಾಮಿಯ ದರ್ಶನ ಪಡೆದರು. ದಾಸಪ್ಪಗಳಿಗೆ ಬಿಲ್ಲುಗೂಡು ಸೇವೆ ಹಾಗೂ ನೂರೊಂದೆಡೆ ಸೇವೆ ನಡೆಯಿತು.

ದೇವಾಲಯದ ಆವರಣದಲ್ಲಿ ದಾಸಪ್ಪಗಳ ಬನವಾಸಿ ತುಂಬುವ ಕಾರ್ಯದೊಂದಿಗೆ ನೂರೊಂದು ಎಡೆಗಳನ್ನು ಹಾಕಿ ಬಹುಪರಾಕ್ ಹಾಕುತ್ತಾ ವಾದ್ಯದೊಂದಿಗೆ ಮಹಾಮಂಗಳಾರತಿ ನಡೆಯಿತು.ಆಗಮಿಸಿದ್ದ ಭಕ್ತರಿಗೆ ಪನಿವಾರ ವಿತರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದು ಸ್ವಾಮಿಯ ದರ್ಶನ ಪಡೆದರು.

 

► Follow us on –  Facebook / Twitter  / Google+

 

Facebook Comments

Sri Raghav

Admin