ಆಂಧ್ರದಲ್ಲಿ ಸಂಕ್ರಾಂತಿಯಂದು ನಡಯುವ ಕೋಳಿ ಕಾಳಗ : ಹೊಸ ಆದೇಶಕ್ಕೆ ಸುಪ್ರೀಂ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

Hen-Fight-01

ನವದೆಹಲಿ, ಜ.13-ಸಂಕ್ರಾಂತಿ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗಗಳನ್ನು ನಿಲ್ಲಿಸಲು ಯಾವುದೇ ಹೊಸ ಆದೇಶ ಹೊರಡಿಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಆಂಧ್ರಪ್ರದೇಶ ಹೈಕೋರ್ಟ್ ಈ ಸಂಬಂಧ ನೀಡಿರುವ ನಿರ್ದೇಶನಗಳನ್ನು ಸರ್ಕಾರ ಪಾಲಿಸದೇ ಇರುವಾಗ ಹೊಸ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.  ರಾಜ್ಯದಲ್ಲಿ ಕೋಳಿ ಜಗಳಗಳನ್ನು ನಿಷೇಧಿಸುವಂತೆ ಹೈಕೋರ್ಟ್ ಹೊರಡಿಸಲಾದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ ಎಂದು ಕಾರ್ಯಕರ್ತರಾದ ಗೌರಿ ಮೌಲ್ಲೆಖಿ ಅವರು ಸಲ್ಲಿಸಿರುವ ಹೊಸ ಮನವಿಯನ್ನು ಹಿರಿಯ ವಕೀಲ ಸಿದ್ಧಾರ್ಥ್ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು.

ಈಗಾಗಲೇ ಆಂಧ್ರಪ್ರದೇಶ ಹೈಕೋರ್ಟ್ ಈ ಸಂಬಂಧ ಆದೇಶ ನೀಡಿದೆ. ಆದರೆ ಅದನ್ನು ರಾಜ್ಯ ಸರ್ಕಾರ ಅನುಸರಿಸಿಲ್ಲ. ಹೀಗಾಗಿ ಮತ್ತೆ ಹೊಸ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.  ನಿಷೇಧಿತ ಜಲ್ಲಿಕಟ್ಟು (ಹೋರಿ ಪಳಗಿಸುವ) ಕ್ರೀಡೆ ಕುರಿತು ಸಂಕ್ರಾಂತಿ ಹಬ್ಬದ ಒಳಗೆ ತಾನು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನಿನ್ನೆ ಹೇಳುವ ಮೂಲಕ ಪೊಂಗಲ್  ದಿನದಂದು ಈ ಸ್ಪರ್ಧೆ ನಡೆಸುವುದು ಅಕ್ರಮ ಮತ್ತು ಕಾನೂನು ಬಾಹಿರ ಎನ್ನುವುದನ್ನು ಸೂಚ್ಯವಾಗಿ ತಿಳಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin