ಆಂಧ್ರದಲ್ಲಿ ಸೆರೆಸಿಕ್ಕ ಎಟಿಎಂ ಹಲ್ಲೆಕೋರನನ್ನ ಬೆಂಗಳೂರಿಗೆ ಕರೆತರಲು ಪೊಲೀಸರು ಸಿದ್ದತೆ

ಈ ಸುದ್ದಿಯನ್ನು ಶೇರ್ ಮಾಡಿ

ATM-Attack-Bengaluru

ಬೆಂಗಳೂರು, ಫೆ.5- ಆಂಧ್ರದಲ್ಲಿ ಸಿಕ್ಕಿಬಿದ್ದಿರುವ ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿಯನ್ನು ನಗರಕ್ಕೆ ಕರೆತರಲು ಪೊಲೀಸರು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಮಧುಕರ್ ರೆಡ್ಡಿಯನ್ನು ಕರೆತರುವ ಕುರಿತಂತೆ ಇಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಂಧ್ರದ ಮದನಪಲ್ಲಿಗೆ ಮತ್ತೊಂದು ವಿಶೇಷ ಪೊಲೀಸ್ ತಂಡ ರವಾನಿಸಲು ತೀರ್ಮಾನಿಸಿದ್ದಾರೆ.   ಧುಕರ್ ರೆಡ್ಡಿ ಸಿಕ್ಕಿಬಿದ್ದ ವಿಷಯ ತಿಳಿಯುತ್ತಿದ್ದಂತೆ ಸಿಸಿಬಿ ಪೊಲೀಸರ ತಂಡ ಆಂಧ್ರಕ್ಕೆ ದೌಡಾಯಿಸಿದ್ದು , ಅಲ್ಲೇ ಬೀಡುಬಿಟ್ಟಿದೆ. ಇದರ ಜೊತೆಗೆ ಎಸಿಪಿ ನೇತೃತ್ವದ ಮತ್ತೊಂದು ತಂಡ ಶೀಘ್ರ ಮದನಪಲ್ಲಿಗೆ ತೆರಳಲಿದೆ. ಬೆಂಗಳೂರು ಪೊಲೀಸರ ವಿಶೇಷ ತಂಡ ಮದನಪಲ್ಲಿಗೆ ತೆರಳುತ್ತಿದ್ದಂತೆ ಮಧುಕರ್ ರೆಡ್ಡಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಿ ಅಗತ್ಯ ಮಾಹಿತಿ ಸಂಗ್ರಹಿಸಿ ಅಲ್ಲಿನ ನ್ಯಾಯಾಲಯದ ಮುಂದೆ ರೆಡ್ಡಿ ವಿರುದ್ಧ ಬಾಡಿ ವಾರೆಂಟ್ ಅರ್ಜಿ ಸಲ್ಲಿಸಲಿದೆ.

ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿಯನ್ನು ಆದಷ್ಟು ಬೇಗ ನಗರಕ್ಕೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನಗರ ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.   ರೆಡ್ಡಿ ನಗರದಲ್ಲಿ ಕೇವಲ ಒಂದೇ ಒಂದು ಪ್ರಕರಣದಲ್ಲಿ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಆತ ಆಂಧ್ರದಲ್ಲಿ ಮೂರ್ನಾಲ್ಕು ಘೋರ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದರಿಂದ ನ್ಯಾಯಾಲಯದ ಮುಂದೆ ಪ್ರಮುಖ ಮಾಹಿತಿಗಳನ್ನು ಮಂಡಿಸಿ ಬಾಡಿ ವಾರೆಂಟ್ ಮೇಲೆ ಆತನನ್ನು ನಗರಕ್ಕೆ ಕರೆತರುವುದು ಪೊಲೀಸರ ಉದ್ದೇಶವಾಗಿದೆ.

ಈ ಮಧ್ಯೆ ರೆಡ್ಡಿ ಬಂಧನದ ನಂತರ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಆತನನ್ನು ಬೆಂಗಳೂರು ಪೊಲೀಸರಿಗೆ ಒಪ್ಪಿಸುವುದೇ ಅಥವಾ ಆತನ ವಿರುದ್ದ ಇಲ್ಲೇ ಪ್ರಕರಣ ದಾಖಲಿಸಬೇಕೆ ಎಂಬ ಬಗ್ಗೆ ಚಿತ್ತೂರು ಪೊಲೀಸರು ಇಂದು ಮಹತ್ವದ ಸಭೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin