ಆಂಧ್ರ, ತೆಲಂಗಾಣದಲ್ಲಿ 50,000 ಮದುವೆಗಳು ಕ್ಯಾನ್ಸಲ್..!

ಈ ಸುದ್ದಿಯನ್ನು ಶೇರ್ ಮಾಡಿ

Marriage-01

ಹೈದರಾಬಾದ್, ಡಿ.4-ಅದ್ದೂರಿ ವಿವಾಹ ಸಮಾರಂಭಗಳಿಗೆ ಹೆಸರಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನೋಟು ರದ್ದತಿಯಿಂದ ದೊಡ್ಡ ಮಟ್ಟದ ಹಣಕಾಸು ಮುಗ್ಗಟ್ಟು ಉಂಟಾಗಿ ಶುಭ ಕಾರ್ಯಕ್ಕೆ ಬಿಕ್ಕಟ್ಟಾಗಿದೆ. ಮಾರ್ಗಶಿರಾ ಮಾಸದ ಶುಕ್ಲ ಪಕ್ಷವಾದ ಇಂದು ಮದುವೆಗಳಿಗೆ ಅತ್ಯಂತ ಪ್ರಶಸ್ತವಾದ ದಿನವಾಗಿದ್ದು, 50 ಸಾವಿರಕ್ಕೂ ಹೆಚ್ಚು ವಿವಾಹ ಸಮಾರಂಭಗಳು ಸ್ಥಗಿತಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಇದರಿಂದಾಗಿ ಕುಟುಂಬಗಳ ಕನಸುಗಳು ಭಗ್ನಗೊಂಡಿದ್ದು ನಿರಾಸೆಯ ಕಾರ್ಮೋಡ ಈ ಎರಡೂ ರಾಜ್ಯಗಳನ್ನು ಆವರಿಸಿದೆ. ಹಣ ಕೊರತೆ ನೀಡಿ ಬ್ಯಾಂಕುಗಳು ಕಡಿಮೆ ಪ್ರಮಾಣದ ನಗದು ನೀಡುತ್ತಿವೆ. ಹಣ ಪಡೆಯಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸಲು ಇರುವ ನಿಯಮಗಳಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಹಣ ಲಭಿಸಿಲಿಲ್ಲ. ಮದುವೆ ನಡೆಸಲು ಕಟ್ಟಕಡೆಯ ಪ್ರಯತ್ನ ನಡೆಸಿದ ಅನೇಕ ಕುಟುಂಬಗಳು ಹಣಕಾಸಿನ ಮುಗ್ಗಟ್ಟಿನಿಂದಾಗಿ ಕೈಚೆಲ್ಲಿವೆ. ಈ ಕಾರಣಗಳಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೆರಡಲ್ಲೇ 50,000ಕ್ಕೂ ಹೆಚ್ಚು ಮದುವೆಗಳು ನಿಂತಿವೆ ಅಥವಾ ಮುಂದೂಡಲ್ಪಟ್ಟಿವೆ.

ಈಗಾಗಲೇ ಮದುವೆ ಪೂರ್ವಭಾವಿ ತಯಾರಿಗಾಗಿ ತಮ್ಮಲ್ಲಿದ್ದ ಸಾಕಷ್ಟು ಹಣವನ್ನು ವೆಚ್ಚ ಮಾಡಿದ್ದರು. ಈಗ ಒಂದೆಡೆ ಆ ಹಣವೂ ನಷ್ಟವಾಗಿದೆ. ಮತ್ತೊಂದಡೆ ಮದುವೆ ಸಮಾರಂಭಗಳು ಮುರಿದು ಬಿದ್ದಿವೆ. ಇದರಿಂದ ವಧು-ವರರ ಪೋಷಕರು ಕಂಗಾಲಾಗಿದ್ದಾರೆ. ತಮ್ಮ ಮಕ್ಕಳ ಮುಂದಿನ ಭವಿಷ್ಯದ ಚಿಂತೆಯೂ ಕಾಡುತ್ತಿದೆ.  ತಮ್ಮ ಮಕ್ಕಳ ಮದುವೆಗೆ ದಿನಾಂಕ ನಿಗದಿಯಾಗಿದೆ. ಹಣವಿದ್ದರೂ ಅದನ್ನು ಬ್ಯಾಂಕ್‍ಗಳಿಂದ ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಪರಿಯಾಗಿ ಬೇಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ನೊಂದ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Marriage-01

ಈ ಸಮಸ್ಯೆ ಕೇವಲ ಆಂಧ್ರ ಮತ್ತು ತೆಲಂಗಾಣಕ್ಕೆ ಮಾತ್ರ ಸೀಮಿತವಾಗಿಲ್ಲ, ಕರ್ನಾಟಕ, ತಮಿಳುನಾಡು, ಕೇರಳ, ಹಾಗೂ ಉತ್ತರ ಭಾರತದ ಅನೇಕ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಸಾವಿರಾರು ಮದುವೆ ಮಹೋತ್ಸವಗಳು ಬಂದ್ ಆಗಿವೆ ಅಥವಾ ರದ್ದಾಗಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin