ಆಂಧ್ರ ಸಬ್‍ಇನ್‍ಸ್ಪೆಕ್ಟರ್’ರೊಬ್ಬರ ಮಗ ಕಿಡ್ನಾಪ್

ಈ ಸುದ್ದಿಯನ್ನು ಶೇರ್ ಮಾಡಿ

Kidnap

ಕೆಜಿಎಫ್,ನ.23-ಆಂಧ್ರ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನನ್ನು ಅಪಹರಿಸಿರುವ ದುಷ್ಕರ್ಮಿಗಳು ತಾಲ್ಲೂಕಿನಲ್ಲಿ ತಲೆಮರೆಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಬೈರೆಡ್ಡಿಹಳ್ಳಿಯ ಸಬ್‍ಇನ್‍ಸ್ಪೆಕ್ಟರ್ ಕೃಷ್ಣಮೋಹನ್ ಅವರ ಮಗುವನ್ನು ಕಳೆದ 18ರಂದು ದುಷ್ಕರ್ಮಿಗಳು ಅಪಹರಿಸಿದ್ದರು.  ಅಪಹರಣಕಾರರ ಬಂಧನಕ್ಕೆ ಶೋಧ ಕಾರ್ಯ ನಡೆಸಿದಾಗ ಆರೋಪಿಗಳು ಕೆಜಿಎಫ್‍ನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧಾರದ ಮೇಲೆ ರಾಮಕುಪ್ಪಂ,ಕುಪ್ಪಂ ಹಾಗೂ ಬೈರೆಡ್ಡಿಹಳ್ಳಿಯ ವಿಶೇಷ ಪೊಲೀಸ್ ತಂಡಗಳು ತಾಲ್ಲೂಕಿನಲ್ಲಿ ಬೀಡುಬಿಟ್ಟಿವೆ.
ಇಡೀ ಕೆಜಿಎಫ್‍ನ್ನು ಶೋಧಿಸುತ್ತಿರುವ ಆಂಧ್ರ ಪೊಲೀಸರಿಗೆ ಸ್ಥಳೀಯ ಪೊಲೀಸರು ಸಹಕಾರ ನೀಡುತ್ತಿದ್ದರೂ ಅಪಹರಣಕಾರರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹೀಗಾಗಿ ಪೊಲೀಸರು ಆಂಧ್ರದಲ್ಲಿ ಅಪಹರಣ ನಡೆದಿರುವುದರ ಬಗ್ಗೆ ಕನ್ನಡದಲ್ಲಿ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುತ್ತಿದ್ದಾರೆ.

<  ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್ –  Click Here to Download >

Facebook Comments

Sri Raghav

Admin