ಆಕಸ್ಮಿಕವಾಗಿ ಜೆಸಿಬಿ ಯಂತ್ರ ತಗುಲಿ ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30-ಕೆರೆ ಅಂಗಳದ ಸಮೀಪ ಮಗುವನ್ನು ಮಲಗಿಸಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಜೆಸಿಬಿ ಯಂತ್ರದ ಮಣ್ಣು ತೋಡುವ ಭಾಗ ತಗುಲಿ ತೀವ್ರ ಗಾಯಗೊಂಡು ಮಗು ಮೃತಪಟ್ಟಿರುವ ಘಟನೆ ಮಹದೇವಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಹನುಮಂತಯ್ಯ ದಂಪತಿಯ ಮಗು ಅನಸೂಯ(5) ಮೃತಪಟ್ಟ ದುರ್ದೈವಿ.  ಮಹದೇವಪುರ ಕೆರೆ ಅಂಗಳದಲ್ಲಿ ಕಾಮಗಾರಿ ನಡೆಯುತ್ತಿದ್ದು, ಹನುಮಂತಯ್ಯ ದಂಪತಿ ಅಲ್ಲೇ ಸಮೀಪದಲ್ಲಿ ಮಗುವನ್ನು ಮಲಗಿಸಿ ಕೆಲಸದಲ್ಲಿ ತೊಡಗಿದ್ದರು.  ನಿನ್ನೆ ಮಧ್ಯಾಹ್ನ 12.45ರ ಸಮಯದಲ್ಲಿ ಮಣ್ಣು ಅಗೆಯುತ್ತಿದ್ದ ಸಂದರ್ಭದಲ್ಲಿ ಜೆಸಿಬಿಯ ಮಣ್ಣು ತೆಗೆಯುವ ಭಾಗ ಮಗುವಿನ ತಲೆಗೆ ತಾಗಿ ತೀವ್ರಗಾಯಗೊಂಡು ಸಾವನ್ನಪ್ಪಿದೆ.  ಮಹದೇವಪುರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin