ಆಕಸ್ಮಿಕವಾಗಿ ಬೆಂಕಿಬಿದ್ದು ಬೇಕರಿ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

fire

ಅರಕಲಗೂಡು, ಆ.8– ಬೇಕರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಬೆಲೆ ಬಾಳುವ ಯಂತ್ರೋಪಕರಣ ಹಾಗೂ ಬೇಕರಿ ತಿನಿಸುಗಳು ಸುಟ್ಟುಭಸ್ಮವಾಗಿರುವ ಘಟನೆ ಸಂಭವಿಸಿದೆ.  ಪಟ್ಟಣದ ತೋಪೆಗೌಡ ವಾಣಿಜ್ಯ ಮಳಿಗೆಯಲ್ಲಿನ ಶ್ರೀಲಕ್ಷೀವೆಂಕಟೇಶ್ವರ ಬೇಕರಿಯಲ್ಲಿ ನಿನ್ನೆ ಬೆಳಗ್ಗೆ 11-45ರ ಸುಮಾರಿಗೆ ಬೇಕರಿ ಉತ್ಪನ್ನ ತಯಾರು ಮಾಡುವ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಾಲೀಕ ವ್ಯಾಪಾರ ನಡೆಸುವ ಭರಾಟೆಯಲ್ಲಿ ಇದನ್ನು ಗಮನಿಸಿಲ್ಲ. ಕ್ಷಣಾರ್ಥದಲ್ಲಿ ಇಡೀ ಅಂಗಡಿಗೆ ಬೆಂಕಿ ಆವರಿಸಿದ್ದರಿಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಅಕ್ಕಪಕ್ಕದಲ್ಲಿನ ಗೊಬ್ಬರ, ದಿನಸಿ, ಪುಟ್‍ವೇರ್ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.  ಈ ಸಂಬಂಧ ಅಂಗಡಿ ಮಾಲೀಕ ಜಗದೀಶ್ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.

Facebook Comments

Sri Raghav

Admin