ಆಕಸ್ಮಿಕವಾಗಿ ಸಂಪ್‍ಗೆ ಬಿದ್ದ ಆಕಳು ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

COW-BELAGAM-5

ಗದಗ.ಆ.30- ಮನೆಯ ಮುಂದಿನ ನೀರಿನ ಟ್ಯಾಂಕರ್‍ಗೆ ಆಕಸ್ಮಿಕವಾಗಿ ಬಿದ್ದ ಆಕಳನ್ನು ಅಗ್ನಿಶಾಮಕ ದಳ ಹಾಗೂ ಯುವಕರು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮಾಡುವ ಮೂಲಕ ಸುರಕ್ಷಿತವಾಗಿ ಹೊರತೆಗೆದು ಭಕ್ತಿಯಿಂದ ಪೂಜಿಸಿದ ಘಟನೆ ಇಲ್ಲಿನ ರಾಜೀವ ಗಾಂಧಿ ನಗರದಲ್ಲಿ ನಡೆಯಿತು.  ನೆಲ್ಸೇನ್ ಮಂಡೇಲಾ ಶಾಲೆ ಬಳಿಯ ಮನೆ ಮುಂದಿನ ನೀರು ಸಂಗ್ರಹದ ಟ್ಯಾಂಕರ್‍ನಲ್ಲಿ ಆಕಳು ಬಿದ್ದ ಸುದ್ದಿ ತಿಳಿದ ಮನೆಯವರು ನೆರೆಹೊರೆಯವರು ಕೂಗಿ ಆಕಳು ರಕ್ಷಣೆಗೆ ಕೇಳಿಕೊಂಡರು.ರಾಮು ಕುಂದರಗಿ, ರಿಯಾಜ್ ಡಂಬಳ, ರಫೀಕ್ ಅಣ್ಣಿಗೇರಿ, ಹುಸೇನಸಾಬ ಕೌತಾಳ, ಜಹಾಂಗೀರ ಕಳಸಾಪೂರ, ರಫೀಕ್ ಮುಲ್ಲಾ ಮುಂತಾದ ಯುವಕರ ತಂಡ ಆಕಳು ರಕ್ಷಣೆಗೆ ಮುಂದಾದರಲ್ಲದೆ ತಕ್ಷಣ ಅಗ್ನಿ ಶಾಮಕ ದಳದವರಿಗೆ ವಿಷಯ ತಿಳಿಸಿದರು.

ಆಗ ಸ್ಥಳಕ್ಕೆ ದೌಡಾಯಿಸಿ ಬಂದ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಘಟಕದ ಸಿಬ್ಬಂದಿ ರುದ್ರಯ್ಯ ಹಿರೇಮಠ, ಜೆ.ಎ. ಜಾನೋಪಂಥರ, ಅಶೋಕ ಗದಗ, ವ್ಹಿ.ಪಿ. ಹುಲಕೋಟಿ ಮುಂತಾದವರು ಇಕ್ಕಟ್ಟಿನಲ್ಲಿದ್ದ ನೀರಿನ ಟ್ಯಾಂಕರ್‍ದಿಂದ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕೊನೆಗೆ ಸುರಕ್ಷಿತವಾಗಿ ಆಕಳನ್ನು ಹೊರತೆಗೆದು ಸಮಾಧಾನದ ನಿಟ್ಟಿಸಿರುಬಿಟ್ಟರು. ನಂತರ ಮಹಿಳೆಯರು ಹಾಗೂ ಯುವಕರು ಗೋಮಾತೆಗೆ ಪೂಜೆ ಸಲ್ಲಿಸಿ ಸಂತೃಪ್ತರಾದರು.

 

► Follow us on –  Facebook / Twitter  / Google+

Facebook Comments

Sri Raghav

Admin