ಆಕಸ್ಮಿಕ ಬೆಂಕಿಗೆ ಮನೆ ಭಸ್ಮ : ಸುಮಾರು 4 ಲಕ್ಷ ರೂ. ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆ.ಆರ್.ಪೇಟೆ, ಫೆ.25- ಮನೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಮನೆ ಭಾಗಶಃ ಸುಟ್ಟು ಸುಮಾರು ನಾಲ್ಕು ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ನಡೆದಿದೆ.ಅಘಲಯ ಗ್ರಾಮದ ದಿ.ಬೋಜೇಗೌಡರ ಮಗ ಎ.ಬಿ.ನಿಂಗೇಗೌಡ ಉರುಫ್ ತಮ್ಮಣ್ಣ ಎನ್ನುವವರಿಗೆ ಸೇರಿದ ಮನೆ ಅಗ್ನಿ ಆಕಸ್ಮಿಕಕ್ಕೆ ಒಳಗಾಗಿದ್ದು , ಮನೆ ಮಾಲೀಕರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಬೆಂಕಿ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದ ಉಂಟಾಗಬಹುದಾದ ಪ್ರಾಣಾಪಾಯ ತಪ್ಪಿದೆ.  ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಮನೆ ಹೊತ್ತಿ ಉರಿಯುತ್ತಿದ್ದನ್ನು ನೋಡಿದ ಸಾರ್ವಜನಿಕರು ಮನೆ ಮಾಲೀಕ ರೈತ ತಮ್ಮಣ್ಣ ಅವರಿಗೆ ವಿಷಯ ತಿಳಿಸಿ, ಬೆಂಕಿ ನಂದಿಸಲು ಮುಂದಾದರು. ಬಿಸಿಲಿನ ಜಳ ಮತ್ತು ಗಾಳಿಯ ರಭಸಕ್ಕೆ ಬೆಂಕಿಯ ಕೆನ್ನಾಲಿಗೆಗೆ ಮತ್ತಷ್ಟು ತೀವ್ರಗೊಂಡಿದ್ದರಿಂದ ಅಕ್ಕ-ಪಕ್ಕದ ಮನೆಯವರು ಆತಂಕಕ್ಕೊಳಗಾದರು. ಕೂಡಲೇ ಗ್ರಾಮಸ್ಥರು ನೀರು ಹಾಕಿ ಬೆಂಕಿ ಆರಿಸಲು ನೆರವಾದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಮೂಲಕ ಇತರೆ ಮನೆಗಳಿಗೆ ಬೆಂಕಿ ಆವರಿಸಿದಂತೆ ತಡೆದರು. ಅಷ್ಟರಲ್ಲಿ ತಮ್ಮಣ್ಣ ಅವರ ಸಂಪೂರ್ಣವಾಗಿ ಮನೆಯಲ್ಲಿದ್ದ 50 ಸಾವಿರ ನಗದು ಹಣ, ಲಕ್ಷಾಂತರ ರೂ. ಬೆಲೆ ಬಾಳುವ ತೆಂಗಿನ ಕಾಯಿ, ಪಾತ್ರೆ, ಪಗಡ, ಬಟ್ಟೆ-ಬರೆ, ಆಹಾರ ಸಾಮಗ್ರಿಗಳು ಸೇರಿದಂತೆ ದಿನಬಳಕೆಯ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಬಸ್ಮವಾದವು. ಇದರಿಂದ ಮನೆಯ ಮಾಲೀಕ ತಮ್ಮಣ್ಣ ಅವರಿಗೆ ಸುಮಾರು 4 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಾದ ಹರೀಶ್, ಪ್ರಮೋದ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣದ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅರುಣ್‍ಕುಮಾರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin