ಆಕಸ್ಮಿಕ ಬೆಂಕಿ : ನೂರಾರು ಗಿಡ-ಮರಗಳು ಸುಟ್ಟು ಕರುಕಲು

ಈ ಸುದ್ದಿಯನ್ನು ಶೇರ್ ಮಾಡಿ

turuvekere

ತುರುವೇಕೆರೆ, ಮಾ.4- ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಮರಗಳು ಹಾಗೂ ಬಾಳೆ ಗಿಡಗಳು ಸುಟ್ಟು ಕರಕಲಾಗಿರುವ  ಘಟನೆ ತಾಲೂಕಿನ ದಂಡಿನಶಿವರ ಹೋಬಳಿಯ ಲಕ್ಕಸಂದ್ರ ಗ್ರಾಮದ ಬಳಿ ನಡೆದಿದೆ.ರೈತ ಶಿವಪಂಚಾಕ್ಷರಯ್ಯ ಅವರಿಗೆ ಸೇರಿದ 2 ಎಕರೆ ತೆಂಗಿನ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ಫಲಭರಿತ ತೆಂಗಿನ ಮರಗಳು, ಬಾಳೆ ಬಹುತೇಕ ಸುಟ್ಟು ಹೋಗಿದ್ದು ಲಕ್ಷಾಂತರ ರೂ. ಮೌಲ್ಯ ನಷ್ಟ ಸಂಭವಿಸಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ತೋಟದ ಬೇಲಿ ಮೂಲಕ ಶಿವಪಂಚಾಕ್ಷರಯ್ಯ ಅವರ ತೋಟಕ್ಕೆ ವ್ಯಾಪಿಸಿದೆ. ಬೇಸಿಗೆಯ ಬಿಸಿಲು ತಡೆಯಲು ಮರದ ಬುಡದಲ್ಲಿ ಹಾಕಿದ್ದ ಒಣ ತೆಂಗಿನಗರಿಗಳು ಒತ್ತಿ ಉರಿದು ಬುಡವೆಲ್ಲಾ ಸುಟ್ಟು ಹೋಗಿವೆ.

ಬೆಂಕಿಯ ಕೆನ್ನಾಲಿಗೆ ಪಕ್ಕದ ವೆಂಕಟರಾಮಯ್ಯ ಅವರ ತೋಟಕ್ಕೂ ವ್ಯಾಪಿಸಿ ಅವರಿಗೆ ಸೇರಿದ 10 ಮರಗಳು ಸುಟ್ಟು ಹೋಗಿವೆ. ಗ್ರಾಮದಿಂದ ಬಹು ದೂರದಲ್ಲಿ ತೋಟವಿದ್ದರಿಂದ ಬೆಂಕಿ ಬಿದ್ದ ವಿಚಾರ ತಿಳಿಯುವ ವೇಳೆಗೆ ನೂರಾರು ತೆಂಗಿನ ಮರಗಳು ಹಾಗೂ ಬಾಳೆ ಗಿಡಗಳು ಸುಟ್ಟು ಭಸ್ಮವಾಗಿವೆ. ನಂತರ ಗ್ರಾಮಸ್ಥರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin