ಆಕಾಶವಾಣಿಯಲ್ಲಿ ಇಂದು ರಾತ್ರಿ ಶಿಕ್ಷಣ ಸಚಿವರೊಂದಿಗೆ ನೇರ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

tanveer

ಬೆಂಗಳೂರು, ಅ.19– ಇಂದು ರಾತ್ರಿ 9.30ರಿಂದ 10.30ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಇಲಾಖೆ ಮತ್ತು ವಕ್ಫ್ ಮಂಡಲಿ ಸಚಿವ ತನ್ವೀರ್‍ಸೇಠ್ ಅವರೊಂದಿಗೆ ನೇರ ಸಂವಾದ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗಲಿದೆ. ತನ್ವೀರ್‍ಸೇಠ್ ಅವರಿಗೆ ಸೇರಿದ ಶಿಕ್ಷಣ, ಅಲ್ಪಸಂಖ್ಯಾತ ಇಲಾಖೆಗೆ ಸಂಬಂಧಿಸಿದಂತೆ ಕೇಳುಗರು ಇಂದು ರಾತ್ರಿ 9.30ರಿಂದ 10.30ರವರೆಗೆ ನೇರವಾಗಿ ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳಲು ಹಾಗೂ ಪ್ರಶ್ನೆ ಕೇಳಲು ದೂ.ಸಂ.22370477, 22370488, 22370499, ಎಸ್‍ಟಿಡಿ ಕೋಡ್ 080 ಬಳಸಬೇಕು.  ಈ ಕಾರ್ಯಕ್ರಮ ರಾಜ್ಯದ 13 ಆಕಾಶವಾಣಿ, ಡಿಟಿಎಚ್ ಕನ್ನಡ ವಾಹಿನಿಯಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin