ಆಕೆಯ ಒಳ ಉಡುಪಿನಲ್ಲಿತ್ತು 64,38,960ರೂ. ಮೌಲ್ಯದ 2 ಕೆಜಿ 160 ಗ್ರಾಂ ಚಿನ್ನ..!

ಈ ಸುದ್ದಿಯನ್ನು ಶೇರ್ ಮಾಡಿ

Gold-02

ನವದೆಹಲಿ, ಆ.23- ಹೈದರಾಬಾದ್ ಮೂಲದ ಮಹಿಳೆಯೊಬ್ಬಳನ್ನು ಬಂಧಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಆಕೆಯ ಒಳ ಉಡುಪಿನಲ್ಲಿದ್ದ 2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈಕೆಯ ಅಂಡರ್ವೇರ್ನಲ್ಲಿ 64,38,960ರೂ. ಮೌಲ್ಯದ 2 ಕೆಜಿ 160 ಗ್ರಾಂ ಚಿಕ್ಕ ಗೋಲ್ಡ್ ಬಾರ್ ಗಳು ಪತ್ತೆಯಾದವು. ಈಕೆಯನ್ನು ಫರ್ಹಾಯತ್ ಉನ್ನೀಸಾ ಎಂದು ಗುರುತಿಸಲಾಗಿದೆ. ದುಬೈನಿಂದ ದೆಹಲಿಗೆ ಜೆಟ್ಏರ್ವೇಸ್ನಲ್ಲಿ ಬಂದಿಳಿದ ಈಕೆಯನ್ನು ನಿನ್ನೆ ಏರ್ ಇಂಟೆಲಿಜೆನ್ಸ್ ಯೂನಿಟ್ (ಎಐಯು) ಅಧಿಕಾರಿಗಳು ಗುಮಾನಿ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು. ನಂತರ ಮಹಿಳಾ ಸಿಬ್ಬಂದಿ ಈಕೆಯನ್ನು ತಪಾಸಣೆ ಮಾಡಿದಾಗ ಆಕೆ ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.  ಪ್ರಸ್ತುತ ಆಕೆಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin