ಆಕ್ರೋಶ ದಿವಸ ಆಚರಣೆ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

1

ಬೆಳಗಾವಿ,ನ.28- ಕೇಂದ್ರ ಸರ್ಕಾರ 500 ಹಾಗೂ 1000 ರೂ. ಬ್ಯಾನ್ ಮಾಡಿದ ಹಿನ್ನಲೆಯಲ್ಲಿ ಪ್ರತಿಪಕ್ಷಗಳಿಂದ ಇಂದು ಆಕ್ರೋಶ ದಿವಸ ಆಚರಣೆ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಯಾವುದೇ ಬಂದ್ ಬಿಸಿ ತಟ್ಟಿಲ್ಲ. ನಗರದಲ್ಲಿ ಎಂದಿನಂತೆ ಕೆಎಸ್‍ಆರ್ಟಿಸಿ ಹಾಗೂ ನಗರ ಬಸ್ ಸಂಚಾರ ಸಂಚಾರ ಆರಂಭಿಸಿದವು. ಅಲ್ಲದೇ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಎಂದಿನಂತೆ ಸರಾಗವಾಗಿ ನಡೆದಿದೆ. ಬಂದ್ ಬಿಸಿ ಎಲ್ಲಿಯೂ ತಟ್ಟಿಲ್ಲ. ಜನಜೀವನ ಯಥಾಸ್ಥಿತಿ ಇತ್ತು. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಎಂದಿನಂತೆ ಅವು ಆರಂಭಗೊಂಡವು. ಇನ್ನು ಆಟೋ ಟೆಂಪೋ  ಸೇರಿದಂತೆ ಖಾಸಗಿ ಬಸ್ ಎಂದಿನಂತೆ ಸಂಚಾರ ಆರಂಭಿಸಿದವು. ಇನ್ನು ಬೇರೆ ಬೇರೆ ಊರುಗಳಿಂದ ಬಸ್‍ಗಳು ಆಗಮಿಸುತ್ತಿವೆ.

ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿದೆಡೆ ಕೆಎಸ್‍ಆರಟಿಸಿ ಸಂಚಾರ ಸರಾಗವಾಗಿ ಆರಂಭಿಸಿದವು. ಯಾವುದೇ ಅಕ್ರೋಶ್ ದಿವಸ ಆಚರಣೆಯ ಲಕ್ಷಣಗಳು ಕಾಣಲಿಲ್ಲ್ಲ. ಈ ದಿನಾಚರಣೆ ಸಂಪೂರ್ಣ ವಿಫಲವಾಗಿದ್ದು ವಿರೋಧ ಪಕ್ಷಗಳಿಗೆ ಜನಬೆಂಬಲ ಇಲ್ಲದ ಹಿನ್ನಲೆ ಮುಖಭಂಗವಾಗಿದೆ.ಇದರ ಮಧ್ಯೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾಂಕೇತಿಕವಾಗಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ನೋಟು ಹಿಂತೆಗೆತ ವಿರೋಧಿಸಿ ಮನವಿ ರವಾನಿಸಿತು. ಆಕ್ರೋಶ ದಿವಸಕ್ಕೆ ಜನತೆಯಿಂದ ಆಕ್ರೋಶ ವ್ಯಕ್ತವಾಗದೇ ಕರೆ ಕೊಟ್ಟವರಿಗೆ ಮಜುಗುರ ಉಂಟಾಯಿತು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin