ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್…!

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಗುರುಗಾಂವ್, ಜೂ.6- ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕಂಕುಳಲ್ಲಿದ್ದ ಮಗುವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ರಸ್ತೆಗೆ ಎಸೆದು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಗೆ ಎಸೆಯಲ್ಪಟ್ಟ ಎಂಟು ತಿಂಗಳ ಹೆಣ್ಣುಮಗುವಿನ ತಲೆಗೆ ಗಾಯವಾಗಿ ಮಗು ಮೃತಪಟ್ಟಿದೆ.  ಮೇ.29 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಮಧ್ಯರಾತ್ರಿ 9 ತಿಂಗಳ ಹೆಣ್ಣು ಮಗುವಿನೊಂದಿಗೆ ಆಟೋದಲ್ಲಿ ತನ್ನ ತಾಯಿ ಮನೆಗೆ ಹೊರಟಿದ್ದಳು. ಮೂವರು ಆರೋಪಿಗಳ ವಿರುದ್ಧ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಹತ್ಯೆ ಮತ್ತು ಲೈಂಗಿಕ ಕಿರುಕುಳ ಪ್ರಕರಣವನ್ನು ಮೇ 30ರಂದು ದಾಖಲಿಸಲಾಗಿತ್ತು.ನೆರೆಮನೆಯವರ ಜತೆ ಜಗಳವಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 23 ವರ್ಷದ ಮಹಿಳೆ ಆಟೊ ಹಿಡಿದು ತವರು ಮನೆಗೆ ಹೊರಟಿದ್ದಳು. ಪತಿ ಕೆಲಸದ ನಿಮಿತ್ತ ಬೇರೆಡೆಗೆ ಹೋಗಿದ್ದರಿಂದ ಮಧ್ಯರಾತ್ರಿಯಾದರೂ ಖಂದಾ ರಸ್ತೆಯಲ್ಲಿರುವ ತವರು ಮನೆಗೆ ಹೋಗುವುದು ಅನಿವಾರ್ಯವಾಗಿತ್ತು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಮಹಿಳೆ ಮೊದಲು ನೀಡಿದ್ದ ದೂರನ್ನು ಪರಿಷ್ಕರಿಸಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡಿದ್ದಾರೆ. ಆಟೋದಲ್ಲಿ ಮೂವರು ಪುರುಷರು ಕುಳಿತಿದ್ದರು. ಆಟೋ ಸ್ವಲ್ಪ ದೂರ ತೆರಳುತ್ತಿದ್ದಂತೆ ಕಾಮುಕರು ಆಕೆಯ ಮೇಲೆ ದೌರ್ಜನ್ಯವೆಸಗಲು ಆರಂಭಿಸಿದ್ದಾರೆ. ಈ ವೇಳೆ ಮಹಿಳೆ ಕೂಗಾಡಿದ್ದಾಗ ಮಗು ಅಳಲು ಆರಂಭಿಸಿದೆ. ನಂತರ ಕಾಮುಕರು ಮಗುವನ್ನು ಆಟೋದಿಂದ ಹೊರಗೆ ಹಾಕಿ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆಂದು ತಿಳಿದುಬಂದಿದೆ.

ಮಗುವಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೆಹಲಿ-ಗುರುಗಾಂವï ಎಕ್ಸï ಪ್ರೆಸï¿ವೇ ಗೆ ಹತ್ತಿರವಿರುವ ಖಾಂದಾ ರಸ್ತೆಯಲ್ಲಿ ಘಟನೆ ನಡೆದಿತ್ತು ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ.  ಆಟೋ ಹತ್ತಿದ ತಕ್ಷಣ ಮೂವರು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದರು. ನಾನು ಪ್ರತಿರೋಧ ಒಡ್ಡಿ, ಜೋರಾಗಿ ಕಿರುಚಿಕೊಂಡೆ. ಮಗು ಕೂಡಾ ಅಳಲು ಆರಂಭಿಸಿತು. ಮಗುವನ್ನು ಕೈಯಿಂದ ಎಳೆದುಕೊಂಡು ರಸ್ತೆಗೆ ಎಸೆದರು. ಅಸಹಾಯಕಳಾದ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದರು ಎಂದು ಹೇಳಿದ್ದಾರೆ.ಇದಕ್ಕೂ ಮುನ್ನ ಮಹಿಳೆ ಐಎಂಟಿ ಮನೇಸರ್ ಬಳಿಯ ತನ್ನ ಗ್ರಾಮದಿಂದ ಟ್ರಕ್‍ನಲ್ಲಿ ಡ್ರಾಪ್ ಪಡೆದಿದ್ದಳು. ಆದರೆ ಟ್ರಕ್ ಚಾಲಕ ಪಾನಮತ್ತನಾಗಿ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ ಎಂಬ ಕಾರಣಕ್ಕೆ ಖೇರ್ಕಿ ದೌಲಾ ಟೋಲ್‍ಪ್ಲಾಜಾ ಬಳಿ ಟ್ರಕ್‍ನಿಂದ ಇಳಿದು ಆಟೊ ಹಿಡಿದಳು ಎಂದು ಪೊಲೀಸರು ವಿವರಿಸಿದ್ದಾರೆ.  ಆರೋಪಿಗಳ ವಿರುದ್ಧ ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin