ಆಟೋಗಳಿಗೂ ಬಂತು ಬ್ಯಾಟರಿ

ಈ ಸುದ್ದಿಯನ್ನು ಶೇರ್ ಮಾಡಿ

Auto

ಬೆಂಗಳೂರು, ನ.4- ವೋಲ್ಟಾ ಆಟೋಮೆಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜಪಾನ್‍ನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಬ್ಯಾಟರಿ ಚಾಲಿತ ವಾಹನಗಳನ್ನು ನಿಯಂತ್ರಿಸಲು ಮುಂದಾಗಿದೆ ಎಂದು ಸಂಸ್ಥೆಯ ಸಿಇಒ ರಾಹುಲ್ ಶ್ರೀನಿವಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವೋಲ್ಟಾ ಆಟೋಮೆಟಿವ್ ಇಂಡಿಯಾ ಸಂಸ್ಥೆ ಈಗಾಗಲೇ ಬ್ಯಾಟರಿ ಚಾಲಿತ ಆಟೋರಿಕ್ಷಾ ತಯಾರಿಕೆಗೆ ಮುಂದಾಗಿದ್ದು, ಇದರ ಬ್ಯಾಟರಿ ಪರಿಸರಕ್ಕೆ ಪೂರಕವಾಗಿದೆ. ಸುಮಾರು 5 ರಿಂದ 6 ಗಂಟೆಗಳಷ್ಟು ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ ನೂರು ಕಿಲೋ ಮೀಟರ್ ದೂರ ಓಡಿಸಬಹುದಾದಷ್ಟು ಸಾಮಥ್ರ್ಯ ಪಡೆಯುತ್ತದೆ. ಇದರ ಬೆಲೆ ಸುಮಾರು 19 ಸಾವಿರಗಳಷ್ಟಾಗಲಿದೆ ಎಂದು ಮಾಹಿತಿ ನೀಡಿದರು.

ಇಂತಹ ಬ್ಯಾಟರಿಗಳನ್ನು ಔಟ್‍ಲೆಟ್‍ಗಳಲ್ಲಿ ಚಾರ್ಜ್ ಮಾಡಲು ವ್ಯವಸ್ಥೆ ಮಾಡುವ ಅಗತ್ಯವಿದ್ದು, ಕನಿಷ್ಟ ಮೂರು ಜನರನ್ನು ಹೊಂದಿರುವ ಆಟೋಗಳನ್ನು ಎಳೆಯುವ ಸಾಮಥ್ರ್ಯ ಇದಕ್ಕಿರುತ್ತದೆ. ಐದು ವರ್ಷ ಈ ಬ್ಯಾಟರಿ ಬಾಳಿಕೆ ಬರುತ್ತದೆ. ಇದೇ ಜನವರಿಯಲ್ಲಿ ಈ ಬ್ಯಾಟರಿಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದು, ಕೇಂದ್ರದೊಂದಿಗೆ ಈ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.  ಜಪಾನ್‍ನ ಕಂಪೆನಿಯೊಂದಿಗೆ ಈ ಯೋಜನೆ ರೂಪಿಸಿ ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಕಾರು ಹಾಗೂ ದ್ವಿಚಕ್ರ ವಾಹನಗಳಿಗೂ ಈ ಮಾದರಿಯ ಬ್ಯಾಟರಿ ಬಳಸಿ ಚಾಲನೆ ಮಾಡುವ ಬಗ್ಗೆ ಚಿಂತನೆ ಇದೆ ಎಂದು ವಿವರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin