ಆಟೋಗಳು ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

auto
ಗೌರಿಬಿದನೂರು, ಮಾ.8- ಪಟ್ಟಣದಲ್ಲಿ ಆಟೋಗಳ ನಿಲ್ದಾಣಕ್ಕೆ ಸ್ಥಳ ನಿಗದಿ ಮಾಡಲಾಗಿದೆ, ಆಟೋ ಚಾಲಕರು ಮನಬಂದೆಡೆ ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಲಾಗುವುದು ಎಂದು ಎಸ್‍ಐ ಸುಂದರ್ ಎಚ್ಚರಿಕೆ ನೀಡಿದರು.ಚಾಲನ ಪರವಾನಿಗೆ ಮತ್ತು ಸಮವಸ್ತ್ರ ಕಡ್ಡಾಯವಾಗಿರಬೇಕು ಇಲ್ಲವಾದಲ್ಲಿ ಸ್ಥಳದಲ್ಲೇ ದಂಡವನ್ನು ವಿದಿಸಲಾಗುವುದು ಎಂದು ಹೇಳಿದರು.ಆಟೋಗಳಲ್ಲಿ ಅತಿ ಹೆಚ್ಚಿನ ಶಬ್ದವನ್ನಿಟ್ಟುಕೊಂಡು ಚಾಲನೆ ಮಾಡುವ ಆಟೋ ಚಾಲಕರ ಮೇಲೆ ನಿಗದಿತ ಪ್ರಮಾಣಿಕ್ಕಿಂತ ಅತಿ ಹೆಚ್ಚು ಪ್ರಯಾಣಿಕರನ್ನು ಹಾಕುವುದು , ಮುಂದಿನ ಸೀಟ್ (ಪ್ರಂಟ್ ಸೀಟ್)ನಲ್ಲಿ ಪ್ರಯಾಣಿಕರನ್ನು ಕುಳ್ಳರಿಸಿಕೊಂಡು ಪ್ರಯಾಣಿಸುದು ಕಂಡು ಬಂದಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕರಿಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಪಟ್ಟಣದ ಬಿ.ಹೆಚ್.ರಸ್ತೆ, ಮಧುಗಿರಿ ರಸ್ತೆ , ನ್ಯಾಶನಲ್ ಕಾಲೇಜು ಬಳಿಯಿರುವ ಆಟೋ ನಿಲ್ದಾಣದ ಬಳಿಯಲ್ಲಿ ಬಸ್‍ಗಳ ನಿಲುಗಡೆ ಮಾಡಲಾಗುವುದು ಇದರಿಂದ ಪ್ರಯಾಣಿಕರಿಗೆ ಹಾಗೂ ಆಟೋಗಳು ಲಭಿಸುವುದರ ಜತೆಗೆ ಆಟೋ ಚಾಲಕರಿಗೆ ಒಳಿತಾಗಲಿದೆ ಎಂದು ಸುಂದರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin