ಆಟೋ ಚಾಲಕರಿಗೆ ಪಿಂಚಣಿ ನೀಡಿ : 10 ಸಾವಿರ ವಿದ್ಯಾರ್ಥಿ ವೇತನ ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

belgam-----
ಹುಬ್ಬಳ್ಳಿ,ಸೆ.2- ಕೇಂದ್ರ ಸರ್ಕಾರ ಕಾರ್ಮಿಕ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆಕೊಟ್ಟ ಭಾರತ ಬಂದ್ ಬೆಂಬಲಿಸಿ ಇಂದು ಆಟೋರಿಕ್ಷಾ ಮಾಲಿಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಇಲ್ಲಿ ಪ್ರತಿಭಟನೆ ನಡೆಸಿದರು.ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಿಯವರ ಬೊಂಬೆ ಶವ ಯಾತ್ರೆ ನಡೆಸಿ, ಟೈರ್‍ಗೆ ಬಂಕಿ ಹಚ್ಚಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಆಟೋರಿಕ್ಷಾ, ಟ್ಯಾಕ್ಷಿ, ಮಿನಿಲಾರಿ, ಮಿನಿ ಗೂಡ್ಸ್ ಸೇರಿದಂತೆ ಖಾಸಗಿ ವಾಹನ ಚಾಲಕರು ಹಾಗೂ ಮಾಲಕರು ಬಡವರಾಗಿದ್ದು, ಇಂದಿನ ದುಬಾದಿ ದಿನಗಳಲ್ಲಿ ಜೀವನ ನಿರ್ವಹಣೆ ದುಸ್ತರವಾಗಿದೆ.

ಅಲ್ಲದೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಕಷ್ಟಕರ ಎನಿಸುತ್ತಿದೆ. ಹೆಚ್ಚಾಗಿ ಈ ವರ್ಗ ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಬದುಕು ಸಾಗಿಸಲು ಹೆಣಗಾಡುವ ಸ್ಥಿತಿಯಲ್ಲಿದ್ದಾರೆ. ಕಾರಣ ಕೇಂದ್ರ ಸರ್ಕಾರ 2015 ನೂತನ ಸಾರಿಗೆ ನೀತಿ ಕೈಬಿಡಬೇಕು. ವಾಹನ ಚಾಲನಾ ಪತ್ರಕ್ಕೆ 8ನೇ ತರಗತಿ ಕಡ್ಡಾಯ, ವಾಹನ ವಿಮೆ ಹೆಚ್ಚಳ ಕೈಬಿಸಬೇಕು ಎಂದು ಆಗ್ರಹಿಸಿದರು. ಆಟೋ ಚಾಲಕರನ್ನು ಇಎಸ್‍ಐ ವ್ಯಾಪ್ತಿಗೆ ಸೇರಿಸಬೇಕು. 60 ವರ್ಷ ಪೂರೈಸಿದವರಿಗೆ ಪಿಂಚಣಿ ನೀಬೇಕು. ಪ್ರತ್ಯೇಕ ಆಟೋ ಕಾಲನಿ ನಿರ್ಮಿಸಿಕೊಡಬೇಕು. ಚಾಲಕರ ಮಕ್ಕಳಿಗೆ 10 ನೇ ತರಗತಿ ನಂತರ ಹೆಚ್ಚಿನ ಶಿಕ್ಷಣಕ್ಕೆ ವಾರ್ಷಿಕ 10 ಸಾವಿರ ವಿದ್ಯಾರ್ಥಿ ವೇತನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆಟೋರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಗೌರವಾಧ್ಯಕ್ಷ ಮುಸ್ತಾಕ ಕರ್ಜಗಿ, ಕಾರ್ಯದರ್ಶಿ ಚಿದಾನಂದ ಸವದತ್ತಿ, ಪ್ರಕಾರ್ಯದರ್ಶಿ ಪುಂಡಲಿಕ ಬಡಿಗೇರ, ಅಂಬರೀಷ ಅಣಿ, ಪರುಶುರಾಮ ಪೂಜರ, ಲೋಕೇಶ ಚಿಕ್ಕಮಂಗಳೂರ, ಹನುಮಂತ ಮುಳಗುಂದ, ದುರ್ಗಪ್ಪ ಪೂಜರ, ಮೋದಿನಸಾಬ ದೋಬಿ, ದಾನಪ್ಪ ಮಿರ್ಜಿ, ಅಪ್ಪಣ್ಣ ಬ್ಯಾಡಗಿ, ಇಮಾಮ ಜÁಫರ್‍ನದಾಫ, ರವಿ ಹೊಸಮನಿ, ನಾಗರಾಜ ಆಣಿ, ಪ್ರಕಾಶ ಕಡೆಮನಿ, ಹನುಮಂತ ಸೇರಿದಂತೆ ಇತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin