ಆಟೋ ಚಾಲಕರ ಸೇವೆ ಶ್ಲಾಘನೀಯ

ಈ ಸುದ್ದಿಯನ್ನು ಶೇರ್ ಮಾಡಿ

AUTO

ಪಾಂಡವಪುರ, ನ.28- ಕನ್ನಡ ಕಟ್ಟುವ ಕೆಲಸದಲ್ಲಿ ಕನ್ನಡ ಪರ ಹೋರಾಟಗಾರರು, ಸಾಹಿತಿಗಳಷ್ಟೇ ಕೆಲಸವನ್ನು ಆಟೋ ಚಾಲಕರೂ ಮಾಡುವ ಮೂಲಕ ಕನ್ನಡ ನೆಲ, ಜಲ ರಕ್ಷಣೆಗೆ ನಿತ್ಯವೂ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಹೇಳಿದರು.ಪಟ್ಟಣದ ಡಾ.ರಾಜ್‍ಕುಮಾರ್ ವೃತ್ತದಲ್ಲಿ ಪಾಂಡವಪುರ-ದೊಡ್ಡಬ್ಯಾಡರಹಳ್ಳಿ ವೃತ್ತಗಳ ಬ್ರಹ್ಮಲಿಂಗೇಶ್ವರ ಆಟೋ ಚಾಲಕರು ಮತ್ತು ಮಾಲಿಕರ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಆಟೋ ಚಾಲಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಆರ್ಥಿಕ ಭದ್ರತೆ ಇಲ್ಲವಾದರೂ ಇದ್ದುದರಲ್ಲೆ ಸಮಾಜಕ್ಕೆ ಅಮೂಲಾಗ್ರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಆಟೋ ಚಾಲಕರಿಗೆ ಸರ್ಕಾರದ ವಿವಿಧ ಸವಲತ್ತುಗಳು ದೊರೆಯುತ್ತವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದ ಅವರು, ಡ್ರೈವಿಂಗ್ ಲೈಸೆನ್ಸ್ ಮತ್ತು ಇನ್ಸುರೆನ್ಸ್ ಮಾಡಿಸಿಕೊಳ್ಳಿ. ಅದಕ್ಕೆ ಬೇಕಾದ ಮಾಹಿತಿ ತಮ್ಮಿಂದ ಪಡೆದುಕೊಳ್ಳಬಹುದು, ಆಟೋ ಚಾಲಕರ ಎಲ್ಲಾ ಕಷ್ಟಗಳಿಗೂ ತಾವು ಸ್ಪಂದಿಸುವುದಾಗಿ ಭರವಸೆ ನೀಡಿದರು.ಸಂಘದ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ರಾಧಾಕೃಷ್ಣ, ಪದಾಧಿಕಾರಿಗಳಾದ ಕಾಳೇಗೌಡ, ರಾಮಚಂದ್ರ, ಜಗದೀಶ್, ವೀರೇಂದ್ರ ಇತರರು ಇದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin