ಆತಂಕ ಬೇಡ, ಶುಕ್ರವಾರದಿಂದ ಹೊಸ ನೋಟುಗಳು ಬರುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Newss-notes

ನವದೆಹಲಿ,ನ.9- ಕಾಳಧನ ಖೋಟಾನೋಟು ಮತ್ತು ಭ್ರಷ್ಟಚಾರ ತಡೆಗೆ ಸರ್ಜಿಕಲ್ ಸ್ಟೈಕ್ ಮಾದರಿ ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಂಡಿರುವುದರಿಂದ ಜನರ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಅಭಯ ನೀಡಿರುವ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸ ನ.11ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಅತಿಭದ್ರತೆಯ ಹೊಸ 500 ರೂ. ಮತ್ತು 2000 ರೂ.ಗಳ ನೋಟುಗಳು ಲಭ್ಯವಿದೆ ಎಂದು ಪ್ರಕಟಿಸಿದ್ದಾರೆ.  ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಇಂದು ಬೆಳಗ್ಗೆ ಕರೆಯಲಾದ ತುರ್ತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೊಸದಾಗಿ ಚಲಾವಣೆಗೆ ಬರಲಿರುವ ಕರೆನ್ಸಿ ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗಾ ವಹಿಸಲಿದೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಬಳಕೆಯಾಗದೆ ಬಿದ್ದಿದ್ದ ಸಾಕಷ್ಟು ಹಣ ಅಧಿಕೃತವಾಗಿ ಆರ್ಥಿಕ ವ್ಯವಸ್ಥೆಗೆ ಬರತೊಡಗಿದೆ.  ಹೊಸದಾಗಿ ಚಲಾವಣೆಗೆ ಬರಲಿರುವ 500 ರೂ ಮತ್ತು 2000 ರೂ.ಗಳ ಕರೆನ್ಸಿ ಪೂರೈಕೆ ಸುಧಾರಿಸುವ ನಂತರ ಗೊಂದಲ ಪರಿಸ್ಥಿತಿ ಶಮನಗೊಳ್ಳಲಿದೆ ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin