ಆತ್ಮಹತ್ಯೆಗೆ ಯತ್ನಿಸಿ ವಿಫಲರಾದವರ ವಿರುದ್ಧ ಕ್ರಮ ಜರುಗಿಸುವ ಕಾನೂನು ರದ್ಧತಿಗೆ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

Suicide

ನವದೆಹಲಿ, ಆ.21- ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿ ವಿಫಲರಾದವರ ವಿರುದ್ಧ ಕ್ರಮ ಜರುಗಿಸುವ ಕಾನೂನನ್ನು ರದ್ದುಗೊಳಿಸಬೇಕೆಂಬ ಬಗ್ಗೆ ಖ್ಯಾತ ಕಾನೂನು ಪರಿಣಿತರು ಒಲವು ವ್ಯಕ್ತಪಡಿಸಿದ್ದಾರೆ.  ಆತ್ಮಹತ್ಯೆಗೆ ಯತ್ನಿಸಿ ವಿಫಲರಾದವರ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಈಗ ಪ್ರಸ್ತುತವಲ್ಲ. ಬಹಳ ಹಳೆಯದಾದ ಈ ಕಾನೂನನ್ನು ರದ್ದುಗೊಳಿಸುವುದು ಸೂಕ್ತ ಎಂದು ಕಾನೂನು ಪಂಡಿತರ ಅಭಿಪ್ರಾಯಪಟ್ಟಿದ್ದಾರೆ.  ಈ ಕಾನೂನನ್ನು ರದ್ದುಗೊಳಿಸಬೇಕೆಂಬ ವಾದಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿರುವ ಹಿರಿಯ ವಕೀಲೆ ಮತ್ತು ರಾಜ್ಯಸಭಾ ಸದಸ್ಯೆ ಕೆಟಿಎಸ್ ತುಳಸಿ, ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ.

ಓರ್ವ ವ್ಯಕ್ತಿಯು ಜೀವನದಲ್ಲಿ ಸಂಭವಿಸುವ ಗಂಭೀರ ಘಟನೆ ಕಾರಣಕ್ಕಾಗಿ ಆತ್ಮಹತ್ಯೆಯಂಥ ಮಾರ್ಗ ಅನುಸರಿಸುತ್ತಾರೆ. ಇಂಥ ಸಂಗತಿ ಇಲ್ಲದೆ ಯಾವುದೇ ವ್ಯಕ್ತಿ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಜಿಗುಪ್ಸೆಗೊಂಡು ಸಾವಿಗೆ ಶರಣಾಗಲು ಯತ್ನಿಸಿ ವಿಫಲರಾಗುವ ಮಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ ಆತ/ಆಕೆ ಇನ್ನಷ್ಟು ಜರ್ಜರಿತರಾಗುತ್ತಾರೆ ಎಂದು ಅವರು ವಿಶ್ಲೇಷಿಸಿದ್ದಾರೆ.  ಮೊದಲೇ ಜೀವನದಲ್ಲಿ ನೊಂದಿರುವ ಆತ/ಆಕೆಯನ್ನು ಏಕೆ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರಶ್ನಿಸಿರುವ ಅವರು, ಈ ಕಾನೂನು ರದ್ದುಗೊಳಿಸುವುದು ಸೂಕ್ತ ಎಂದು ಹೇಳಿದ್ದಾರೆ. ಅನೇಕ ಕಾನೂನು ತಜ್ಞರು ಮತ್ತು ವಿಚಾರವಾದಿಗಳೂ ಇದೇ ವಾದವನ್ನು ಮುಂದಿಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin