ಆತ್ಮಹತ್ಯೆ ಮಾಡಿಕೊಂಡ ಸೊಸೆ ಸಂಬಂಧಿಕರಿಂದ ಅತ್ತೆ-ಮಾವನಿಗೆ ಹಿಗ್ಗಾಮುಗ್ಗಾ ಥಳಿತ

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಬಾಗಲಕೋಟೆ, ಮಾ.28- ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು, ಸಂಬಂಧಿಕರು ಧಾವಿಸಿ ಮೃತಳ ಅತ್ತೆ -ಮಾವನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ನವ ನಗರದ ರೂಪಾ (28) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ನವನಗರದ ಮಂಜುನಾಥ್ ಎಂಬಾತನನ್ನು ರೂಪಾ ವಿವಾಹವಾಗಿದ್ದರು. ಹಲವು ತಿಂಗಳಿನಿಂದ ರೂಪಾಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದ ಬಗ್ಗೆ ರೂಪಾ ಪೋಷಕರು ರಾಜಿ ಪಂಚಾಯ್ತಿ ಮಾಡಿ ಸಮಾಧಾನಪಡಿಸಿದ್ದರು.

ಕೆಲ ದಿನಗಳ ನಂತರ ಮತ್ತೆ ಗಂಡನ ಮನೆಯವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರಿಂದ ನೊಂದ ರೂಪಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ರೂಪಾ ಸಂಬಂಧಿಕರು ಮನೆ ಬಳಿ ಧಾವಿಸಿ ಈಕೆಯ ಅತ್ತೆ -ಮಾವನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸುದ್ದಿ ತಿಳಿದ ಬಾಗಲಕೋಟೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin