ಆದೇಶ ಪಾಲನೆಗೆ 15 ದಿನ ಗಡುವು ನೀಡಿದ ಮೇಯರ್ ಪದ್ಮಾವತಿ

ಈ ಸುದ್ದಿಯನ್ನು ಶೇರ್ ಮಾಡಿ

padma
ಬೆಂಗಳೂರು, ಅ.6- ನಾನು ನೀಡಿರುವ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಏನೇನು ಕೆಲಸ ಮಾಡಿದ್ದೀರ ಎಂಬುದರ ಬಗ್ಗೆ ಲಿಖಿತ ವರದಿ ಕೊಡಬೇಕು. 15 ದಿನದ ಕಾಲಾವಕಾಶದಲ್ಲಿ ಈ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಮೇಯರ್ ಪದ್ಮಾವತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ದಾಸರಹಳ್ಳಿ ವಲಯದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇಯರ್ ಈ ಎಚ್ಚರಿಕೆ ನೀಡಿದ್ದಾರೆ.ದಾಸರಹಳ್ಳಿ ವಲಯದಲ್ಲಿ ಆಗಿರುವ ಎಲ್ಲ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು, ಅರ್ಹರಿಗೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು, ಕಸವಿಲೇವಾರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು, ತೆರಿಗೆ ವಸೂಲಾತಿ ಸಮರ್ಪಕವಾಗಿರಬೇಕು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಪದ್ಮಾವತಿ ಸೂಚಿಸಿದರು.

ಈ ಎಲ್ಲ ಸಲಹೆ ಸೂಚನೆಗಳ ಬಗ್ಗೆ ಆ್ಯಕ್ಷನ್ ಪ್ಲ್ಯಾನ್ ತಯಾರಿಸಬೇಕು, ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ, ಏನೇನು ಕೆಲಸ ಮಾಡುತ್ತಿದ್ದಾರೆಂಬ ಬಗ್ಗೆ ಲಿಖಿತವಾಗಿ ಕೊಡಬೇಕು. ಎಲ್ಲ ಸಮಸ್ಯೆಗಳನ್ನು 15 ದಿನದೊಳಗೆ ಪರಿಹರಿಸಬೇಕು, ಮತ್ತೆ ನಾನು ಇಲ್ಲಿಗೆ ಭೇಟಿ ನೀಡುವಷ್ಟರಲ್ಲಿ ಇದನ್ನೆಲ್ಲ ಮಾಡಿ ಮುಗಿಸಿರಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮೇಯರ್ ಎಚ್ಚರಿಸಿದರು.ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ಹಿಂದೇಟು ಹಾಕಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ಇದಕ್ಕೆ ನಮ್ಮ ಬೆಂಬಲವಿದೆ. ನಿಗದಿತ ಸಮಯದೊಳಗೆ ಎಲ್ಲ ಕೆಲಸ ಪೂರ್ಣಗೊಳಿಸಿ ಎಂದು ಪದ್ಮಾವತಿ ಸೂಚಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin