‘ಆಧಾರ್ ಪೇ’ಯಿಂದ ಇನ್ನು ಮುಂದೆ ಹೆಬ್ಬಟ್ಟಿನಲ್ಲೇ ಕಾಂಚಾಣ ಝಣ ಝಣ

ಈ ಸುದ್ದಿಯನ್ನು ಶೇರ್ ಮಾಡಿ

Adhaar-Pay-Payment-Cashless

ನವದೆಹಲಿ, ಜ.23- ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು, ರೈತರು ಮತ್ತು ಅನಕ್ಷರಸ್ಥರಲ್ಲಿ ಡಿಜಿಟಲ್ ಹಣ ಪಾವತಿಗೆ ಹೆಚ್ಚಿನ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಆಧಾರ್ ಪೇ ಯೋಜನೆಯನ್ನು ಜನಪ್ರಿಯಗೊಳಿಸಲು ಉದ್ದೇಶಿಸಿದೆ. ಇದರಂತೆ ಕೇವಲ ಫಿಂಗರ್‍ಪ್ರಿಂಟ್ (ಬೆರಳುಮುದ್ರೆ) ಬಳಸಿ ಹಣಕಾಸು ವ್ಯವಹಾರಗಳನ್ನು ನಡೆಸಲು ಇದರಿಂದ  ಅನುಕೂಲವಾಗಲಿದೆ.   ಆಧಾರ್ ಪೇ-ಇದು ಈಗಾಗಲೇ ಬಳಕೆಯಲ್ಲಿರುವ ಆಧಾರ್-ಆಧಾರಿತ ಪಾವತಿ ವ್ಯವಸ್ಥೆಯ (ಆಧಾರ್ ಎನೆಬಲ್ಡ್ ಪೇಮೆಂಟ್ ಸಿಸ್ಟಮ್-ಎಇಪಿಎಸ್) ಸುಧಾರಿತ ರೂಪ.

ಭಾರತದ ಬಹುತೇಕ ಎಲ್ಲ ಗ್ರಾಮೀಣ ಪ್ರದೇಶಗಳ ಕೆಳವರ್ಗದ ಜನರಿಗೆ ಈ ಸೌಲಭ್ಯ ಲಭಿಸುವಂತೆ ಮಾಡುವುದು ಹಾಗೂ ಆ ಮೂಲಕ ಸುಲಭ-ಸುಗಮ ರೀತಿಯಲ್ಲಿ ಹಣಕಾಸು ವಹಿವಾಟು ನಡೆಸುವಂತೆ ಅವಕಾಶ ಕಲ್ಪಿಸುವುದು ಈ ಯೋಜನೆ ಉದ್ದೇಶವಾಗಿದೆ.  ಈ ಆ್ಯಪ್ ಸೌಲಭ್ಯದಿಂದ ವ್ಯಾಪಾರಿಗಳು ಮತ್ತು ವರ್ತಕರಿಗೂ ಅನುಕೂಲವಾಗಲಿದೆ. ಆಧಾರ್ ಸಂಖ್ಯೆ, ಬ್ಯಾಂಕಿನ ಹೆಸರು (ಯಾವ ಶಾಖೆಯಿಂದ ಹಣವನ್ನು ಕಡಿತಗೊಳಿಸಬೇಕು ಅಥವಾ ಪಡೆಯಬೇಕು ಎಂಬ ಮಾಹಿತಿ) ಹಾಗೂ ದೃಢೀಕರಣಕ್ಕಾಗಿ ಬೆರಳುಮುದ್ರೆ (ಫಿಂಗರ್‍ಪ್ರಿಂಟ್)-ಇವುಗಳನ್ನು ಮಾತ್ರ ನೀಡಿದರೆ ಗ್ರಾಹಕರು ನಗದು ರಹಿತ ವಹಿವಾಟನ್ನು ಸುಲಭವಾಗಿ ನಡೆಸಬಹುದಾಗಿದೆ.

ಬಯೋಮೆಟ್ರಿಕ್ ಸಾಧನ ಅಳವಡಿತ ಅತ್ಯಂತ ಕಡಿಮೆ ಬೆಲೆಯ ಯಾವುದೇ ಆಂಡ್ರಾಯ್ಡ್ ಆಧಾರಿತ ಫೋನ್‍ಗಳಲ್ಲೂ ಈ ಆಧಾರ್ ಪೇ ಸೌಲಭ್ಯ ಕಾರ್ಯನಿರ್ವಹಿಸುತ್ತದೆ ಎಂದು ಭಾರತ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮುಖ್ಯ ಕಾರ್ಯನಿರ್ವಹಣಾಧಿಕಾರ ಎ.ಬಿ. ಪಾಂಡೆ ತಿಳಿಸಿದ್ದಾರೆ.  ಇದರಿಂದ ಕಾರ್ಡ್‍ರಹಿತ, ಪಿನ್‍ರಹಿತ ಡಿಜಿಟಲ್ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಗ್ರಾಹಕರು ದುಬಾರಿ ಬೆಲೆಯ ಸ್ಮಾರ್ಟ್‍ಫೆÇೀನ್‍ಗಳನ್ನು ಖರೀದಿಸುವ ಅಗತ್ಯವಿಲ್ಲ. ಆಧಾರ್ ಪೇ ವ್ಯವಸ್ಥೇಯನ್ನು ವರ್ತಕರು, ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರತಿ ಶಾಖೆಗೆ 30-40 ವ್ಯಾಪಾರಿಗಳನ್ನು ನೋಂದಣಿ ಮಾಡುವಂತೆ ಬ್ಯಾಂಕ್‍ಗಳಿಗೆ ಈಗಾಗಲೇ ಸರ್ಕಾರ ಸೂಚಿಸಿದೆ. ಇದರಿಂದಾಗಿ ಗ್ರಾಹಕರ ಮೂಲಕ ನಗದುರಹಿತ ಪಾವತಿ ವಹಿವಾಟು ನಡೆಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಆಂಧ್ರ ಬ್ಯಾಂಕ್, ಐಡಿಎಫ್‍ಸಿ ಬ್ಯಾಂಕ್, ಇಂಡಸ್‍ಲ್ಯಾಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಿಂಡಿಕೇಟ್ ಬ್ಯಾಂಕ್-ಈ ಐದು ಬ್ಯಾಂಕ್‍ಗಳು ಆಧಾರ್ ಪೇ ವಹಿವಾಟಿನಲ್ಲಿ ಕಾಯೋನ್ಮುಖವಾಗಿವೆ. ಹಲವಾರು ಬ್ಯಾಂಕುಗಳು ಈ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಪಾಂಡೆ ವಿವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin