ಆನಂದಿಬೆನ್ ರಾಜೀನಾಮೆ : ಗುಜರಾತ್ ಸಿಎಂ ರೇಸ್‍ನಲ್ಲಿ ವಿಜಯ್ ರುಪಾನಿ

ಈ ಸುದ್ದಿಯನ್ನು ಶೇರ್ ಮಾಡಿ

vijay Rupaniನವದೆಹಲಿ, ಆ.3– ಗುಜರಾತ್‍ನ ನೂತನ ಮುಖ್ಯಮಂತ್ರಿಯನ್ನು ನೇಮಕ ಮಾಡುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಪಕ್ಷದ ಸಂಸದೀಯ ಮಂಡಳಿ ಸಭೆ ಕರೆದಿದ್ದಾರೆ. ಗುಜರಾತ್ ರಾಜ್ಯ ಘಟಕದ ಮುಖ್ಯಸ್ಥ ವಿಜಯ್ ರುಪಾನಿ ಮುಖ್ಯಮಂತ್ರಿ ಗಾದಿ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಬೆಳಗ್ಗೆ ಸಭೆ ಆಯೋಜಿಸಲಾಗಿದೆ. 2017ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಸಿಎಂ ಹುದ್ದೆಗೆ ಏರಿಸಲು ಪಕ್ಷ ಚಿಂತನೆ ನಡೆಸಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಸಚಿವರಾದ ನಿತೀನ್ ಪಟೇಲ್ ಹಾಗೂ ರುಪಾನಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಪಟೇಲ್ ಅವರ ಪರ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಪಟೇಲ್ ಅವರ ಹೆಸರು ಕೂಡಾ ಮುಂಚೂಣಿಯಲ್ಲಿದೆ.


ಪಟೇಲ್ ಅವರಿಗೆ ಮುಖ್ಯಮಂತ್ರಿ ಗಾದಿ ವಹಿಸಿದರೆ, ಪಟೇಲರ ಬೆಂಬಲವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಡೆಯಬಹುದು ಎನ್ನುವುದು ಲೆಕ್ಕಾಚಾರ.  ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಆರ್‍ಎಸ್‍ಎಸ್ ಅಭಿಪ್ರಾಯಪಟ್ಟಿದೆ. ಬೇರೆ ಯಾವ ಸ್ಪರ್ಧಿಗಳು ಕೂಡ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಸಲಾರರು ಎನ್ನುವುದು ಆರ್‍ಎಸ್‍ಎಸ್ ಚಿಂತನೆಯಾಗಿದೆ.
ಅಮಿತ್ ಷಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿಯೇ ಮುಂದುವರಿಯಬೇಕು ಎನ್ನುವುದು ಮೋದಿ ಚಿಂತನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಬಲ ಜೈನ ಸಮುದಾಯಕ್ಕೆ ಸೇರಿದ ರುಪಾಲಿ ಹೆಸರನ್ನೇ ಅಂತಿಮಪಡಿಸುವ ಸಾಧ್ಯತೆಗಳು ದಟ್ಟವಾಗಿವೆ. ಅಭ್ಯರ್ಥಿಯ ಆಯ್ಕೆಯಲ್ಲಿ ಅಂತಿಮ ನಿರ್ಧಾರ ಪ್ರಧಾನಿ ಮೋದಿಯವರದ್ದೇ ಎಂದು ಹೇಳಲಾಗುತ್ತಿದೆ.

vijayrupani-the-frontrunner-to-succeed–patel

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin